Lokeshgouda Joladarashi

Lokeshgouda Joladarashi Poems

ಸತ್ತ ಮನಸಿನ ಮನೆಯಲ್ಲಿ ಕಣ್ಣೀರಿನ ಕನಸುಗಳು
ಹೆತ್ತ ಕರುಳಿನ ಕುಡಿಯಲ್ಲಿ ಬೆಂಕಿಯ ಕೆಂಡಗಳು

ಕಣ್ಮರೆಯಾದ ಅವಳ ಚಿತ್ರದಲ್ಲಿ
...

ಮೋಹದ ಬಲೆಯಲಿ
ಸಾವಿನ ನರ್ತನೆ

ಕೇಳದ ನೋವಲಿ
...

ಮೊದಲನೆಯ ದಿನದ Collegeನ ಹೊಸ ಹೊಸ ಮುಖಗಳು
ಹುಡುಗ ಹುಡುಗಿಯರ Hostelನ ಹಳೆಯ ರೂಮುಗಳು

ಕಾಲೇಜಿನ Boring ಪಾಠಗಳು
...

ಬಾಲ್ಯದಲ್ಲಿ ನಾವು ಕಲಿತ ಶಾಲೆ
ನಮ್ಮ ಜೀವನದ ಮರೆಯಲಾಗದ ಸುಂದರ ಓಲೆ

ಹೊಸ ಬಟ್ಟೆಯಲಿ ಹೊರಟು ನಿಂತೆವು
...

ಆಕಾಶದೆತ್ತರ ಆಸೆಗಳಿಗೆ,
ಏಟುಕದ ಕೈಗಳು

ತಿರದ ಕನಸುಗಳಿಗೆ,
...

ಮುಳ್ಳುನ ಮನೆಯ, ಎಲೆಯ ಚಪ್ಪರದಲ್ಲಿ
ಬಳುಕುವ ಬಳ್ಳಿಯ ಜೋತೆ ಅರಳಿದೆ
...

ಕನಸಲಿ ಕನಸು ಕಾಣುವ ಕನಸಿಗೆ,
ಇದು ಕನಸೇ ಎಂದು ಪ್ರಶ್ನೆ ಮಾಡುವ ಮನಸೇ?
...

ನಗುವ ನಗಿಸುವ ನಯನಗಳು,
ಕಾಡಿಗೆಯ ಜೋತೆ ಕುಣಿವ ಕಣ್ಣಿನ ರೆಪ್ಪೆಗಳು
...

The Best Poem Of Lokeshgouda Joladarashi

ಪ್ರೇಮ ಕಥೆಗಳು

ಸತ್ತ ಮನಸಿನ ಮನೆಯಲ್ಲಿ ಕಣ್ಣೀರಿನ ಕನಸುಗಳು
ಹೆತ್ತ ಕರುಳಿನ ಕುಡಿಯಲ್ಲಿ ಬೆಂಕಿಯ ಕೆಂಡಗಳು

ಕಣ್ಮರೆಯಾದ ಅವಳ ಚಿತ್ರದಲ್ಲಿ
ಜೊಡಿಸಲಾಗದೆ ಒಡೆದ ಚೂರು ಚೂರು ನೆನಪುಗಳು

ಆ ನೆನಪುಗಳ ಅಡಿಯಲ್ಲಿ
ಅಳಿಯದೆ ಉಳಿದ ಭಾವನೆಗಳು

ಸುರಿಯುವ ತುಂತುರು ಮಳೆಯಲ್ಲಿ
ಕೊಡೆ ಹಿಡಿಯದೆ ನೆನೆದ ಮೈಮನಗಳು

ಉರಿಯುವ ಬಿಸಿಲಿನಲ್ಲಿ
ನೆರಳಾದ ನಿನ್ನ ಕೈಗಳು

ಮುಂಜಾನೆಯ ಇಬ್ಬನಿಯಲ್ಲಿ
ಜೊತೆ ನೆಡೆದ ಹೆಜ್ಜೆಯ ಗುರುತುಗಳು

ಮುಸ್ಸಂಜೆಯ ಮುಸುಕಿನಲ್ಲಿ
ಜೊತೆ ಬಿಡದ ನೋವು ನಲಿವುಗಳು

ನೀ ಇಲ್ಲದ ಬದುಕಲ್ಲಿ
ಸಮಯ ಕಳೆಯದ ದಿನಗಳು

ನನ್ನ ಮನೆಯ ಮನದಲ್ಲಿ
ನಿದ್ದೆ ಬರದ ರಾತ್ರಿಗಳು

ನಿನ್ನ ಸೇರುವ ಆಸೆಯಲ್ಲಿ
ಹಾತೊರವ ನನ್ನ ನಯನಗಳು

ನಿನ್ನ ಬಾಹುಬಂಧನದಲ್ಲಿ
ಕೊನೆಯ ಉಸಿರು ಹಸಿರಾದ ಕ್ಷಣಗಳು

ಸಾವಲ್ಲು ಮೆರದ ಜೀವಾತ್ಮಗಳು
ನೋವಲ್ಲು ನಗುವ ಪ್ರೇಮ ಕಥೆಗಳು

ಸಾಹಿತ್ಯ-ಲೋಕೇಶಗೌಡ ಜೋಳದರಾಶಿ

Lokeshgouda Joladarashi Comments

Lokeshgouda Joladarashi Popularity

Lokeshgouda Joladarashi Popularity

Close
Error Success