ವಿಮರ್ಶೆ ವರದಿ Poem by Praveen Kumar in Bhavana

ವಿಮರ್ಶೆ ವರದಿ

ಒರೆಗೆ ಹಚ್ಚಿ ನೋಡುವವನಿಗೇನು,
ಎದುರು ಬಿದ್ದ ಕಲ್ಲು ಮೇಲೆ
ಉಜ್ಜಿ, ಮೈಯ ಹೊರಗೆ ನೋಡಿ,
ಹೊಳೆದುದನ್ನು ಹೇಳಿ ಬಿಡುವ;
ಯಾಕೆ, ಹೇಗೆ, ಏನು ಎಂದು,
ಆಳವೇನು, ಮೂಲವೇನು,
ಒರೆಯ ಮೈಯ ಗಡಸು ಏನು,
ಹೊರಗೆ ಬಿದ್ದ ಕರುಹು ಏನು,
ಎಂಬ ಪ್ರಜ್ಞೆ ಬಯಸನು.

ಆಳಕ್ಕಿಳಿವ ಹರಿತ ಬೇಡ,
ಹಾರಿ ಏರಲು ರಕ್ಕೆ ಬೇಡ,
ಬೆಳಕು ಹೊಳಪು ಹೀರಿ ಬಿಡಲು
ಪ್ರೇಕ್ಷಕವು ಅವಶ್ಯವಿಲ್ಲ;
ಸಿಗಿದು, ಜಿಗಿದುಕ, ನೋಡುವಂತ
ಕಾಲ ವ್ಯವಧಾನ ಬೇಡ,
ಅನುಕಂಪ ಧ್ರುವ ಧ್ರುವ ನಡುವೆ
ಹಾರುವಂತ ಸಹೃದಯ ಬೇಡ,
ಹಗುರವಾಗಿ ನುಡಿವನು.

ಹೊರಮೈಯ ನೋಡಿ ನಿಯಮ ಹೇಳಿ
ಮಿಮರ್ಶೆ ವರದಿ ಮಾಡುವ,
ಕಪ್ಪೋ ಬಿಳಿಯೋ ಎಂದು ನೋಡಿ
ಗುಣಾವಗುಣಗಳ ನುಡಿಯುವ,
ತನ್ನೊಳಗಿನ ಕಹಿ ಸಿಹಿಯ ಹೆಕ್ಕಿ
ಹುಳಿ, ಉಪ್ಪು, ಮಸಾಲೆ ಸುರಿಸಿ
ಕೃತಕ ಪಾಕವಿಳಿಸಿ ಕೊಟ್ಟು
ಬ್ರಹ್ಮ ಸ್ಠೃಷ್ಠಿ ಮೆಲೆ ಅವನು
ತೀರ್ಮಾನವನ್ನು ನೀಡುವ.

ನೇಸರನು ನೋಡಿ ನಗುವ
ಕಪ್ಪು ಮೋಡರಾಶಿ ಅವನು,
ಮೇಲೆ ಉಗುಳಿ, ಆಕಾಶ ತುಳಿದೆ,
ಎಂಬ ಭ್ರಮೆಯಲಿ ಬದುಕುವ;
ಮೇಲೆ, ಕೆಳಗೆ ಯಾರೂ ಇಲ್ಲ,
ಯಾಕೆ, ಹೇಗೆಂಬ ಪ್ರಶ್ನೆ ಇಲ್ಲ,
ಸ್ವಚ್ಛಂದವೊಂದು ವರವು ಇಲ್ಲಿ,
ರೀತಿ, ನೀತಿ, ಭೀತಿ ಇರದೆ
ಉಗುಳು ಬಂದಲ್ಲಿ ಉಗುಳುವ.

ವಿದ್ಯೆ ಬೇಡ, ಪ್ರಾವಿಣ್ಯ ಬೇಡ,
ಶಬ್ದ ಕ್ಷಿಪಣಿ ಮೋಡಿುಂದ
ವೃತ್ತಿ ವಿಮರ್ಶೆ ವರದಿಗಾರ
ಮೇಲುಕ್ಕಿಬಂದ ಗಾಳಿಗುಳ್ಳೆಯನ್ನ,
ತನ್ನೊಳಗಿನಿಂದ ಅತೃಪ್ತಿಯನ್ನ
ಹಿಡಿದು ಗಾರೆ ಹಾಕಿ ಕೊಡುವ;
ನಂಬಿ ಬಂದ ಜನರ ಜಾತ್ರೆ
ಪೂಜಾರಿ ಕೊಡುವ ಪ್ರಸಾದದಿಂದ
ದೇವರನ್ನು ತಿಳಿವರು.

Friday, April 29, 2016
Topic(s) of this poem: criticism
COMMENTS OF THE POEM
READ THIS POEM IN OTHER LANGUAGES
Close
Error Success