ಚಿಪ್ಪು Poem by Praveen Kumar in Bhavana

ಚಿಪ್ಪು

ಕತ್ತು ಹೊರಚಾಚಿ ತಲೆ ಬಲಿ ನೀಡಬೇಡ,
ನಾಲಗೆ ಬಿಚ್ಚಿ ದೆವ್ವಗಳು ಮಚ್ಚೆತ್ತಿ ಕಾದಿಹವು;
ಮೈ ಹದ್ದಿನಲ್ಲಿಡು, ಮೈಮರೆತು ಹೊರಗಿಳಿಯದಿರು,
ವಿಷಮ ಜನ ವಿಷವಿಟ್ಟು ಹೆಡೆ ಬಿಚ್ಚಿ ಕಾದಿಹರು;
ರಕ್ತಬಸಿವ ಜಿಗಣೆಗಳ ವಿಷಮುಳ್ಳು ನೆಲದಲ್ಲಿ
ನಿನ್ನ ಹುತ್ತದ ಹೊರಗೆ ಮೈಕೈುಟ್ಟು ಕೆಡಬೇಡ,
ಯಂತ್ರ ಮಂತ್ರ ತಂತ್ರಗಳ ನಿನ್ನೆದೆಯಲ್ಲಿ ಬಿಚ್ಚಿಟ್ಟು
ರೆಪ್ಪೆ ಸದಾ ತೆರೆದಿಟ್ಟು ರಕ್ತಹೋರಾಟ ನೋಡು.

ಹೊರಗೆ ಕಲಹಕದನಗಳ ಹುಚ್ಚೆದ್ದ ದೊಂಬಿುದೆ,
ಲಾಭಕ್ಕಾಗಿ ಮಧ್ಯೆತೂರಿ ಪೆಟ್ಟುಗಿಟ್ಟು ತಿನ್ನಬೇಡ,
ನಿಯಮ ನಿಯತ್ತು ನಂಬಿ ನೀನು ಜನಜಾತ್ರೆ ಸೇರಬೇಡ,
ಬಟ್ಟೆಬಿಚ್ಚಿ, ಹಿಂದೆದೂಡಿ, ಗುಂಪುಕೂಡಿ ಹೊಡೆವರು,
ಒಂದೊಂದೆ ಒದೆತದಿಂದ ನೆಲ್ಲಕ್ಕೆ ಚಚ್ಚಿ ಹಿಡಿವರು,
ಕೈಕಾಲು ತಲೆಯ ಬಿಚ್ಚಿ ದಿಕ್ಕುದಿಕ್ಕಿಗೆ ಎಸೆವರು,
ಕಣ್ಣುಬಿಟ್ಟು, ಸಮಯಕ್ಕಾಗಿ ನಿನ್ನೊಳಗೆ ಅಡಗಿರು,
ಹೊರಗೆ ಬಂದು ಕೆಲಸ ಮುಗಿಸಿ, ಗೂಡು ಮತ್ತೆ ಸೇರಿರು.

ನಿನ್ನ ಸಣ್ಣ ಲೋಕದಲ್ಲಿ ತೃಪ್ತಿುದೆ, ಸ್ವಾರಸ್ಯವಿದೆ,
ಒಡೆಯನೆಂಬ, ತನ್ನದೆಂಬ ಸ್ವಂತಭಾವ ಸ್ಥೈರ್ಯವಿದೆ,
ಸುಂಕಋಣದ ಭಾದೆುಲ್ಲ, ಹೊಂದಿ ನಡೆವ ಬಂಧವಿಲ್ಲ,
ಬಳ್ಳಿಯಂತೆ ತಬ್ಬಿ ಬೆಳೆವ ದಾಸ್ಯದಾರ ವೃತ್ತಿುಲ್ಲ;
ಸತ್ವದಿಂದ ತುಂಬಿ ಬಂದು, ಬಿಂಕದಿಂದ ಬೀಗಿ ನಿಂತು,
ಹೆಜ್ಜೆ ಹೆಜ್ಜೆ ಹದನವರಿತು ತನ್ನದಾರಿ ಹಿಡಿಯಬೇಕು,
ದುಷ್ಟಲೋಕದ ಗೊಡವೆ ಬೇಡ, ಭಾರ ರಹಿತ ಬಾಳು ಬೇಡ,
ಅಡ್ಡದಾರಿ ತಂದುಕೊಡುವ ಬಡ್ಡಿ ಹಣದ ಬದುಕು ಬೇಡ.

ಚಳಿಮಳೆಗೆ ಮೈಯನ್ನೊಡ್ಡಿ ಹಿಮದಹುಣ್ಣು ತರುವುದೇಕೆ?
ಚಿಪ್ಪಿನೊಳಗಿನ ಕಾವಿನಲ್ಲಿ ಗಟ್ಟಿಯಾಗಿ ನಿಲ್ಲಬೇಕು;
ರಂಗಮಂಚ ಹತ್ತಿನಿಂತು ನಟನೆುಂದ ಬೆಳೆಯಬೇಕೆ?
ಮನೆಯೊಳಗಿನ ಹದ್ದಿನಲ್ಲಿ ಹೃದಯತುಂಬಿ ಹಬ್ಬಬೇಕು,
ಪರರ ಹಂಗು ಕೊನೆಯ ತನಕ ಭಾರವಾದ ಕೊರಳಿನುರುಳು,
ಹಿಂದೆ ಸರಿದು, ಸರದಿಗಾಗಿ ಸಹನೆುಂದ ಕಾಯಬೇಕು;
ಊದಿಕೊಂಡ ದೇಹದಿಂದ ಕೆಟ್ಟನೀರು ಬರುವುದು,
ದೇಹಗಾತ್ರದಲ್ಲೆ ನಿಂತು ಬಗ್ಗಿ ಬಾಳು ನಡೆಸಬೇಕು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success