ಕೆಲವೊಂದು ಬಾರಿ ಹೀಗೂ ನಡೆಯುತ್ತದೆ ಸ್ವಾಮೀ Poem by Praveen Kumar in Bhavana

ಕೆಲವೊಂದು ಬಾರಿ ಹೀಗೂ ನಡೆಯುತ್ತದೆ ಸ್ವಾಮೀ

ಕೆಲವೊಂದು ಬಾರಿ ಹೀಗೂ ನಡೆಯುತ್ತದೆ ಸ್ವಾಮೀ,
ನೆಲದಿಂದ ಆಕಾಶಕೆ ಹಿಡಿದ ಸಮಾಜದ ಏಣಿಯಲಿ
ಸ್ವಸ್ಥಾನಕೆ ತಡಪಡಿಸುವ, ತಡವರಿಸುವ ಜನರಾಶಿ
ಮೇಲಿರುವ ಕಾಲುಗಳ ಕೆಳಗೆಳೆದು ಸುಖಪಡುವ,
ಕೆಳಗಿರುವ ನಿರ್ಬಲರ ಮೇಲೆಳೆದು ಬದಿಸರಿವ,
ವಿವಿದ ರೂಪ ಸ್ವಭಾವಗಳ ಕುರುಡು ಓಟ ನಡೆಯುವುವು,
ಮರೆತಿರುವ ಸ್ವಸ್ಥಾನವ ಜಂಘಬಲ ನಿರ್ಧರಿಸುವುವು.

ಏಣಿ ಎತ್ತರದಲ್ಲೆ ತಮ್ಮಕಂಡವರೊಂದು ಕಡೆ,
ವಿಧಿುತ್ತ ಮಿತಿಯಲ್ಲೆ ಅತ್ಯುನ್ನತೆ ಕಂಡವರೊಂದು ಕಡೆ,
ಮೇಲೆ ಮೇಲೇರುವುದರಲ್ಲೆ ಜೀವಸವೆಸಿದವರೆಷ್ಟೊ,
ಮೇಲೇರ ಬಯಸದೆ ಸುಖಶಾಂತಿ ಕಂಡವರು ಅದು ಎಷ್ಟೊ,
ನೆಲದಿಂದ ಎತ್ತರ ನೋಡಿ, ಎತ್ತರದಿಂದ ನೆಲನೋಡಿ
ಹಳಿ ಹಳಿದು ಪರರಾಶೆ ಪಟ್ಟವರು ಹಲವು,
ಕಾಲೂರಿದ ನೆಲದಲ್ಲಿ ಮೈಮರೆತವರು ಹಲವು.

ಈ ಏಣಿಹಾವಿನಾಟದಲಿ, ಮೈಮನ ಮೇಲಾಟದಲಿ,
ಮೇಲೇರಿ ಕೆಳಗಿಳಿದ ಜ್ಞಾನಿಗಳ ಜನರಾಶಿ
ಏಣಿ ಎತ್ತರದಿಂದ ದಿಟ್ಟಿಕೆಳಗಿಳಿಸಿಲ್ಲ,
ಯಾಕೀ ನಿರ್ವೀರ್ಯ ಓಡಾಟ ಮರೆತಿಲ್ಲ?
ಕೆಳಗಿಳಿಯಲೆಂದೆ ಮೇಲೇರುವ ಪರಿಪಾಠ,
ಮೇಲೇರಲೆಂದೆ ಕೆಳಗಿಳಿಯುವ ಪರಿಪಾಠ
ಬದಿಗಿಟ್ಟು ತನ್ನತನ ಕಾಯುವುದೆ ದೊಡ್ಡತನ.

ಜೀವನದ ದಾರಿಯಲಿ ಎತ್ತರವೊಂದೆ ಮಹತ್ತರವಲ್ಲ,
ಉದ್ದಗಲ, ಗುಣತ್ರಾಣ, ಸಂದಿಗೊಂದಿನ ದಾರಿುವೆ,
ಕೆಳಗಿಳಿಯುವ ಭಯವರಿಯದ ಸಮತಟ್ಟು ಕಾಲ್ದಾರಿುವೆ;
ವೈವಿಧ್ಯಮರೆತಿವರು ಏಣಿಯುದ್ದ ಕೈುಟ್ಟು
ಅಗಲ ಕಿರಿದು ದಾರಿಯಲಿ ಹೋರಾಡುವುದೇಕೆ?
ಜನರಾಶಿಯಲೊಂದಾಗಿ, ಹಳೆಜಾಡಿನ ಮಡಿ ಹಿಡಿದು
ಹೊಸದಿನವ, ಹೊಸತನವ ಮರೆಯುತ್ತಿರುವುದೇP?

ಎತ್ತರ ಎತ್ತರಕ್ಕೇರಿ ಮುಂದೆ ಹೋಗುವುದೆಲ್ಲೆಂದು
ತಲೆಎತ್ತಿ ಭವಿಷತ್ತು ನೋಡುವವರಿಲ್ಲ,
ಏಣಿ ತುದಿಯಲಿ ನಿಂತು ಸಾಗಿದ ದೂರವೆಷ್ಟೆಂದು
ಏರಿದ ಎತ್ತರಕೆ ಕೊಟ್ಟ ಬೆಲೆನೆಲೆ ಎಷ್ಟೆಂದು
ಕಣ್ಣಿಟ್ಟು ನೆಲದೆಡೆ ನೋಡಿ ಅಳೆಯುವವರಿಲ್ಲ;
ಮೇಲೇರುವ ಕೂಟ ಓಟಕ್ಕಿಟ್ಟ ಬೆಲೆ ತಿಳಿದವರೂ ಇಲ್ಲ,
ಗಾಳಿ ಕುಡಿಯಲು ಹೋಗಿ ನೆಲನೆಲೆ ಕೈತಪ್ಪಿದವರೆಲ್ಲ.

ತನ್ನ ತೂಕಕೆ ತಕ್ಕ ಎತ್ತರದಲ್ಲಿ: ಸುಖಶಾಂತಿುದೆ,
ತನ್ನ ಒಟಕೆ ತಕ್ಕ ಕೂಟದಲಿ ನೋಟಮಾಟವಿದೆ,
ಎಡಬಲ ನೋಡಿ, ಮುಂದೆ ಹಿಂದಿನ ಗುಟ್ಟುಪಟ್ಟುಗಳನರಿತು
ಹೆಜ್ಜೆ ಹೆಜ್ಜೆಯನಿಟ್ಟು ಸರಿದಾರಿ ಸಾಗುವುದು,
ನಡೆವ ದಾರಿಯ ಕೊನೆಯ ಲಕ್ಷ್ಯ ತಿಳಿಯುವುದು,
ಗುರಿಯ ಕೊನೆಯ ಭಾವಧ್ಯೇಯವರಿಯುವುದು,
ತನ್ನತನ ಕಾಯುವುದು, ಎತ್ತರದಾಶೆ ಅಳಿಸುವುದು.

ಜನಜಂಗುಳಿ ಜಾಡಿನಲಿ, ಜನಜಂಗುಳಿ ರಾಶಿಯಲಿ
ಹೋರಾಡಿ ಮೇಲೇರಿ ನೂರರಲೊಂದಾಗುವುದೆ?
ತನ್ನತನ ತಾನರಿತು, ಹೊಸಜಾಡಿನ ಹದಹಿಡಿದು
ಸುಖಶಾಂತಿ ದಾರಿಯಲಿ ಸ್ವಸ್ಥಾನ ತಲಪುವುದೆ?
ತಿಳಿದವರು ಹಲವು, ತಿಳಿಯದವರು ಕೆಲವು,
ಎಲ್ಲರದೊಂದೆ ಏಣಿ ಏರುವ ತವಕ,
ಕೆಲವೊಂದು ಬಾರಿ ಹೀಗೂ ನಡೆಯುತ್ತದೆ ಸ್ವಾಮೀ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success