ಬಯಲು ದಾರಿ Poem by April Pearl

ಬಯಲು ದಾರಿ

ಸರಪಣಿಯಿಂದ ಕಟ್ಟಿರುವ ಕಾಲುಗಳು,
ಸುತ್ತಲೂ ಮುಳ್ಳಿನ ಬೇಲಿ ಚುಚ್ಚುತಿರಲು,
ಜೀವವು ಸಮಾಜದ ಹಕ್ಕಾಗಿರಲು,
ಗುಲಾಮಳಾಗಿದ್ದೇನೆ.

ಆಸೆಗಳ ಬುತ್ತಿ ಜಾಡು ಹಿಡಿಯಲು,
ಆಯಸ್ಸು ಕರಗುತಿರಲು,
ವಿಧಿಯಾಟಕೆ ತಲೆಬಾಗಿರಲು,
ಗುಲಾಮಳಾಗಿದ್ದೇನೆ.

ಸುಖ ದ: ಖದ ತಕ್ಕಡಿಯಲ್ಲಿ,
ಬೆಳಕು ಕತ್ತಲಿನ ಮರೆಯಲ್ಲಿ,
ಮಾಪಿಸಿ ನೋಡಲು ದ: ಖ ಮೇಲ್ಗೈ ಇರಲು,
ಗುಲಾಮಳಾಗಿದ್ದೇನೆ.

ಪರಿಸ್ಥಿತಿಗಳ ಹೆಣೆದು ಬಿಟ್ಟಿರುವ,
ಬಿಡಿಸಲು ಆಗದೆ ಕೊರಗುತಿರುವ,
ಬಿದ್ದು ಎದ್ದು ಸೋತು ಬೀಳುವಂತಾಗಿ,
ಗುಲಾಮಳಾಗಿದ್ದೇನೆ.

ಗೂಡನು ಹುಡುಕಲು, ಗೂಡಿನೊಳ ಪಕ್ಷಿ ತಿರಸ್ಕರಿಸಲು,
ಪ್ರಯತ್ನಿಸಿ ವಿಫಲಳಾಗಿರಲು,
ಒಬ್ಬಂಟಿತನವ ಆರಿಸಲು,
ಗುಲಾಮಳಾಗಿದ್ದೇನೆ.

ಸತ್ಯ, ಅಹಿಂಸೆ, ಪ್ರೀತಿ ಮೂಲೆಯಾಗಿದೆ,
ಅಸತ್ಯ, ಹಿಂಸೆ, ಕಪಟ ಹೆದ್ದಾರಿಯಲ್ಲಿದೆ,
ಮೂಲೆಯ ಗುಂಪಿನೊಳಗೆ ಬೆಲೆ ಇಲ್ಲದೇ,
ಗುಲಾಮಳಾಗಿದ್ದೇನೆ.

ದಿನಗಳು ಎಣಿಸುತಾ, ಮನಸ್ಸಿನೊಳ ತರ್ಕವು ಮಾಡುತ,
ಜೀವನವು ನನ್ನದಾಗಿಸುತಾ, ಕೆಚ್ಚೆದೆಯಾ ನೀಡುತಾ,
ದು: ಖವನು ಶಾಂತಗೊಳಿಸುತಾ, ಜೀವನವನು ಮತ್ತೆ ಮತ್ತೆ ಜೋಡಿಸುತಾ,
ಒಬ್ಬಂಟಿತನದಿ ಪಾಠಗಳ ಕಲಿಯುತ, ಕುಗ್ಗದೇ ಹಿಗ್ಗಿ ನಡೆಯುತಾ,
ಉಧ್ಧಟತನವಾ ಎದುರಿಸುತಾ, ಒಬ್ಬಳೇ ನಡೆಯಲು ನಿರ್ಧರಿಸುತಾ,
ನನ್ನನು ನಾನು ಪ್ರಶಂಸಿಸುತಾ, ಆತ್ಮಸ್ಥೈರ್ಯದೀ ಹೊಸ ಪುಟ ತೆರೆಯುತಾ,
ನಾನು ಯಾರಿಗೂ ಗುಲಾಮಳಲ್ಲಾ.

POET'S NOTES ABOUT THE POEM
This is written in Kannada...I hope I have some kannada readers out there...About the poem..its about a woman who is succumbed to fate, society, people, lost love..And how she finds herself and brims back with confidence and a different outlook towards life..I hope, my dear poet friends who do read this poem will be able to connect to what I said...
COMMENTS OF THE POEM
READ THIS POEM IN OTHER LANGUAGES
April Pearl

April Pearl

kollegala
Close
Error Success