ನನ್ನಾಶೆ ಆದರ್ಶಗಳ ಆಕಾಶದಲಿ
ಕಲೂಖಳರಿ ನಿಂತಿರುವ ಒಚಿಟಿ ಧ್ರುವತಾರೆ ನಾನು,
ಮೂಡಿ, ಕ್ಷಣಿಕ ಬೆಳಕನು ತೂರಿ, ಮುಳುಗುವ
ಸೂರ್ಯ, ಚಂದಿರ, ತಾರೆಗಳು ಹಲವು;
ಯಾವುವೂ ನನ್ನವಲ್ಲ, ಯಾರೂ ನನ್ನವರಲ್ಲ,
ಹೊಂದಿಕೆಯ ಹೊದಿಕೆಯಲಿ ತಲೆ ಹೊದುಕುವವರೆಲ್ಲ;
ಹೆಂಡತಿ, ಮಕ್ಕಳು, ತಾಯಿ, ತಂದೆ, ಸ್ನೇಹಿತರೇ ಇರಲಿ,
ಹೃದಯ ಮುಟ್ಟುವ ಹದದ ಆತ್ಮಸಹಚರರಿರಲಿ,
ನನ್ನಾಕಾಶಕ್ಕೆ ಬರೆ ಅತಿಥಿ ಮಹೋದಯರು,
ದಾರಿಕ್ರಮಣದ ಮಧ್ಯೆ ಸೇರಿದ ತನಿ ಸಹೃದಯರು;
ಹಾಲು ನಗುವನು ಹರಿಸಿ, ಮೆದು ಮಾತು ಮಧು ಬೆರೆಸಿ,
ಬಂದವರನ್ನು ಕದಬಿಚ್ಚಿ, ಬೀಳ್ಕೊಡುವುದು ಲೇಸು,
ಶಾಂತಿ ಸಹನೆಯ ಬಂಧ, ಹೃದಯ ತಟ್ಟಿದಾನಂದ
ಹೃದಯ ಸೇತುವಾಗಿ ನಮ್ಮಲ್ಲುಳಿದರೆ ಸಾಕು;
ಬಾಗಿಲು ಬಡಿದವರೆಲ್ಲ ನೆಲೆಬೇಡಿ ಬರುವವರಲ್ಲ,
ಹೃದಯದೊಳಗಿನ ಹೊಳಪು ಮೊಂಬತ್ತಿ ಹಚ್ಚುವುದಕ್ಕಲ್ಲ,
ನನ್ನಾಕಶಕ್ಕೆ ಪಹರೆ ನನ್ನ ಬಿಟ್ಟು ಬೇರೆ ಕೊಡುವವರಿಲ್ಲ,
ದಾರಿಸೇರಿದ ವಿಧಿಗೆ ನಿರ್ಬಂಧದ ಕದ ಹಾಕುವುದಲ್ಲ;
ನನ್ನ ದಿಗಂತಕೆ ಬಂದ ನನ್ನ ಭಾಗದಭ್ಯಾಗತ,
ಬಲತ್ಕಾರದ ಬಲೆಯಲ್ಲಿ ಬಲಿಗೊಳ್ಳಬೇಡ,
ಅನಸ್ಥಿತ್ವದ ರಾಜ್ಯ ಪಟ್ಟಾಧೀಶನಾಗಿ
ರಕ್ತಸಿಕ್ತ ಪಾಡಿನಲಿ ನನ್ನಿಂದ ದೂರವಾಗಬೇಡ.
This poem has not been translated into any other language yet.
I would like to translate this poem