ಕ್ಲಿಷ್ಠ ಸಂಬಂಧ Poem by PRAVEEN KUMAR Kannada Poems

ಕ್ಲಿಷ್ಠ ಸಂಬಂಧ

ನಾವೆಲ್ಲರೂ ವಿಶಿಷ್ಠ ಪ್ರಜ್ಞವಂತರೆ ಹೌದು,
ನಮನಮಗೆ ನಾವು ಪ್ರಜ್ಞವಂತರು ಹೌದು;
ಬೇರೊಬ್ಬರೊಪ್ಪುವ ಬಿಡುವ ಪರಿವೆ ನಮಗಿಲ್ಲ,
ನಮ್ಮ ನಳೆಯುವ ಶಕ್ತಿ ಬೇರೊಬ್ಬರಿಗಿಲ್ಲ.

ನಮ್ಮ ಬಾವಿಗಳಲ್ಲಡಗಿರುವ ಗೊಟರ ಕಪ್ಪೆ ನಾವು,
ಗಟ್ಟಿಗೋಡೆಗಳ ಮಧ್ಯೆ, ನೀರಿನಾಳದಲಿ ಕೂತು,
ಸಾಗರವೆಂದರೆ ಇದೆಂದು ಗೊಟರು ಹಾಕುವೆವು ನಾವು;
ತಳವೂರಿದ ಬಾವಿಯ ಹೊರಗೆ ಹೋದವರಲ್ಲ,
ಬೇರೆಬಾವಿ, ಕೆರೆ, ಹಳ್ಳ, ನದಿ ಕಂಡವರಲ್ಲ.

ನಮ್ಮೆದುರು ಬಂದವರನ್ನು ಗುರುತಿಸೆವು ನಾವು,
ಗುರುತಿಸಿದರೊಪ್ಪುವ ಜಾಯಮಾನ ನಮ್ಮದಲ್ಲ;
ನಾನು ನನದೆಂಬ ಬುದ್ಧಿ ಸ್ವಂತಿಕೆಯ ತೀವ್ರತೆಗೆ,
ನೀನು ನಿನದೆಂಬ ಪರಭಾವ ಸರಿದೊರೆಯೆ?
ನಮ್ಮೊಳಗು ಹೇಳಿದುದೊಂದೆ ನಿಜ, ಸರ್ವಕಾಲೀನ ಸತ್ಯ.

ಬೇರೆಲ್ಲರ ಮೇಲೆ ತೀರ್ಪಿಗೆ ಕೂತವರು ನಾವು,
ನಾವಾರೂ ಪರರ ತೀರ್ಮಾನಕ್ಕೆ ಬದ್ಧರಲ್ಲ;
ಈ ವ್ಯಕ್ತಿ, ಗುಂಪಿನಸಂಬದ್ಧ ಕ್ಲಿಷ್ಠ ಸಂಬಂಧದ ಮಧ್ಯೆ,
ಈ ನಾನು ನನದೆಂಬ ಕೇಂದ್ರದ ಸುತ್ತ ತಿರುಗುವ ಜೀವನದಲ್ಲಿ
ಸದ್ದುಗದ್ದಲ ಬಿಟ್ಟು, ಶಿಸ್ತು ಸೌಹಾರ್ಧ ಬರಬೇಕೆಲ್ಲಿಂದ?

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success