ಓಮೃತ್ಯು, ನಿನ್ನಾಳ ವೈಶಾಲ್ಯ ಅರಿತವರಿಲ್ಲ,
ಎಲ್ಲಿಂದ ಬರುವೆ, ಎಲ್ಲಿ ಸೇರುವೆ ತಿಳಿದವರಿಲ್ಲ;
ಕಾಲಬಾಹುವೆ, ನಿನ್ನ ಕಾರ್ಗತ್ತಲಿನ ಸ್ಪರ್ಷದಲಿ,
ನಿಂತಿದ್ದ ನೆಲ ಕರಗಿ, ಕಣ್ಣೀರು ಕವಲೊಡೆಯುವುದು,
ನಿಯಮ ಸಾಧಕ, ನಿನ್ನ ಕಣ್ಣು ತಪ್ಪಿಸಿ ಜೀವ
ಕಾಲಯಂತ್ರದ ಕ್ರಿಯೆ ಮೀರಿ ನಡೆಯುವುದುಂಟೆ?
This poem has not been translated into any other language yet.
I would like to translate this poem