ಬನ್ನಿರೈ, ಬನ್ನಿರೈ ಬಾಯಗಲಿ ನಿಂತ ಬಯಲಿಗೆ,
ಬನ್ನಿರೈ, ಬನ್ನಿರೈ ಕೈಯೆತ್ತಿ ಕರೆವ ಕಡಲಿಗೆ,
ದೂರದಿಂದ ನನ್ನ ನಿಮ್ಮ ಬನ್ನಿರೆಂದು ಕರೆಯುತ್ತಿದೆ,
ನನ್ನದೆಲ್ಲ ನಿವ್ಮ್ಮದೆಂದು ಒಡಲು ಬಿಚ್ಚಿ ನುಡಿಯುತ್ತಿದೆ;
ಗೋಡೆ ಕೆಡವಿ, ಕೂಡಿ ಬಂದು, ಕಣ್ಣುಬಿಟ್ಟು ನೋಡಿರೆಂದು,
ಬೆದರು ಬಿಟ್ಟು, ನಿಮ್ಮ ತುಂಬ ಒಡವೆ ತೊಡವೆ ಬಾಚಿರೆಂದು
ಕರೆವುದನ್ನ ಕೇಳಿರ, ಕರೆಯ ಕರಣ ಕಾಣಿರ?
ನಡೆವ ದಾರಿ ಸುಗಮವಿಲ್ಲ, ಕಲ್ಲು ಮುಳ್ಳು ದಾರಿಯೆಲ್ಲ,
ನಡುವೆ ನಾವು, ವಿಷಮ ನಿಯಮ ದುಷ್ಟಕೋಟೆ ಸುತ್ತಲೆಲ್ಲ,
ಕೋಟೆ ಕೆಡವಿ, ನಿಯಮ ಒಡೆದು, ಎಲ್ಲ ಕೂಡಿ ಬನ್ನಿರೈ,
ಬನ್ನಿರೈ, ಬನ್ನಿರೈ ಬಾಯಗಲಿ ನಿಂತ ಬಯಲಿಗೆ.
This poem has not been translated into any other language yet.
I would like to translate this poem