Praveen Kumar in Bhavana Poems

Hit Title Date Added
61.
ಮೂರ್ಖರ ಲೋಕ

ಮೂರ್ಖರ ನಡುವಲಿ ಜಾಣ
ಜಾಣರ ನಡುವಿನ ಮೂರ್ಖನಿಗೆ ಸಮನಲ್ಲ,
ನಗೆಪಾಟಲು, ಅವಹೇಳನ,
ಸಂಖ್ಯಬಾಹುಳ್ಯದ ಚಕ್ರವ್ಯೂಹದ ಒಳಗೆ
...

62.
ಪಹರೆ

ಮೆದು ತಿರುಳಿನ ಹೊರಗೆ ದಪ್ಪನೆಯ ಚಿಪ್ಪು ಚಂದ,
ಸೌಗಂಧವಿರುವ ಹೂವಿಗೆ ಮುಳ್ಳು ಕಳ್ಳಿ ಬೇಲಿ ಚಂದ,
ಜ್ಞಾನವೆಂಬ ಬೆಳಕಿಗೆ ಕತ್ತಲೆಂಬ ಪಹರೆ ಚಂದ,
ಅಭೇದ್ಯ ಶಾಂತಿಗೆ ದ್ವಂದ್ವ ತುಮುಲ ಹೋರಾಟ ಚಂದ.
...

63.
ಕಾಂಡವ ವನ

ನಿನ್ನನ್ನು ಬಿಟ್ಟು ನಿನ್ನವರಾರಿಲ್ಲ ಈ ಕಾಂಡವವನದಲ್ಲಿ,
ತನ್ನತನದಗ್ನಿಯಲಿ ಸುಡುವ ಕಾದ ಬಾಣಲೆಯಲಿ;
ಎಲ್ಲ ಸ್ವಾರ್ಜನೆಗಾಗಿ, ಸ್ವಾಭ್ಯುದಯ ಯೋಜನೆಗಾಗಿ,
ನೀರಿನಲಿ ಬೇರಿಳಿಸಿ ಫಲ ತೆಗೆವ ದುಷ್ಟ ಹೊಂಚುಗಳು ತುಂಬ;
...

64.
ಪ್ರಕೃತಿ

ದೇವಲೋಕ ಧರೆಗಿಳಿದು ನಿಂತ ಇದು ಸೊಗಸೊ,
ಕನಸೊ, ನೆನಸೊ ಇದು ಸತ್ಯಲೋಕದ ಬೆಳಕೊ,
ಏನು ಹಿತಮಿತ ಬೆಡಗು, ಪ್ರಕೃತಿಯ ರಮ್ಯ ಚೆಲುವು!
ಕಣ್ಮನ ಹೃದಯ ತುಂಬುವ ಒನಪು ವೈಯಾರ;
...

65.
ಮಳೆಯು ಬಂದಿದೆ

ಮಳೆಯು ಬಂದಿದೆ, ಭೂಮಿ ತಣಿದಿದೆ,
ಹಸುರು ಹಬ್ಬಿದೆ, ಚೆಲುವು ಚಿಗುರಿದೆ,
ಏನೊ ತಿಳಿಯದ ಹುರುಪು ಪಸರಿಸಿ
ಭೂಮಿ ತಾುಯ ಮಡಿಲು, ಮೈಯಲಿ
...

66.
ಮೆರವಣಿಗೆ

ಗದ್ದಲದ ಮೆರವಣಿಗೆ ಸಾಗುತ್ತಿದೆ ದಾರಿಯುದ್ದ,
ಕೇಳಿರಣ್ಣ, ಕಿವಿಗಚ್ಚುವ ಕೊಂಬು ಕಹಳೆ ಡೋಲು ಶಬ್ದ.

ಸಾಲುಗಳ ಮುರಿದು, ಸರದಿಗಳ ತೊರೆದು,
...

67.
ನೆರಳು

ಓ ನೆರಳೆ, ನಾನೆಲ್ಲಿ ಹೋಗಲಿ, ನೀನು
ಬೆಂಬತ್ತಿ ಹಿಂದೆ ಹಿಂದೆ ಬರುವುದು ಯಾಕೆ?
ನಾನೆಲ್ಲಿ ತರುಗಲಿ, ಯಾವ ದಿನ್ನೆ ಹತ್ತಲಿ, ನೀನು
ಬೆಂಬೆಡದೆ ಪಹರೆ ಕೊಡುವುದು ಯಾಕೆ?
...

68.
ಆಶೆ

ನೋಡಿದೆಲ್ಲ ಬೇಕು ನಮ್ಮ ಆಶೆಬುರುಕು ಮನಸ್ಸಿಗೆ,
ದೂರದಲ್ಲಿ ಕಂಡದನ್ನು ಸಮೀಪ ತಂದು ನೋಡಬೇಕು,
ಕಣ್ಣಿನೆದುರು ಬಿದ್ದುದನ್ನು ಕೈಯ ಬಾಚಿ ತಬ್ಬಬೇಕು,
ಹಿಂದೆ ಮುಂದೆ ನೋಡಿ ನೋಡಿ, ಹಿಂಜಿ ಹಿಂಜಿ ಹಿಪ್ಪೆ ಮಾಡಿ
...

69.
ಗೋಡೆ

ಪಾತಾಳದಿ ಎದ್ದು ಆಕಾಶದ ಕೊನೆಗೆ,
ದಿಗಂತದಿ ಹೊರಟು ದಿಗಂತದವರೆಗೆ
ಇದಾವ ಗೋಡೆ ತಲೆಯೆತ್ತಿದೆ ಹೀಗೆ?
ಆ ಬದಿಯಿಂದ ಈ ಬದಿ ನಡುವೆ
...

70.
ಕಲಿಯುಗ

ಕಲಿಯುಗವಿದು ಹೋರಾಟದ ಯುಗವು,
ಎದ್ದು ಬಿದ್ದೆದ್ದು ಈಜಾಡುವ ಯುಗವು;
ಸಮುದಾಯದ ಮಧ್ಯೆ ತಲೆಯನು ಮರೆಸಿ
ಸರಿಸಮಯಕೆ ಕಾದು, ಅವಮಾನವನೊರಸಿ
...

Close
Error Success