ಆಶಾಸದನ Poem by Praveen Kumar in Bhavana

ಆಶಾಸದನ

ಅವರದೊಂದು ಹಿರಿಯ ಮನೆ,
ಅವರಿಗೊಬ್ಬ ನಾಯಕ,
ಮನೆಯ ತುಂಬ ನಗುವ ಜನ,
ಮಲ್ಲಿ ದಂಡೆ ಆ ಸಂಸಾರವು;
ಮುಳ್ಳು ಕಳ್ಳಿ ಭೀತಿ ಇಲ್ಲ,
ತೃಪ್ತಿ ಸೌಗಂಧ ತೀಡಿದ
ಆ ಮನೆಯೆ ಆ ಊರಿಗೆ ಮಾದರಿ.

ಹತ್ತು ಮಂದಿಯಲ್ಲಿ ಮುಂದು
ತಾವು ಸದಾ ಇರಬೇಕೆಂದು
ಕೂಡಿ ಗಾಡಿ ಎಳೆವ ಮಂದಿ,
ಕುಂದು ಎಲ್ಲೂ ಬೇಡ ಎಂದು
ಹೆಜ್ಜೆ ಮೇಲೆ ಹೆಜ್ಜೆ ಇಡುತ
ಮುನ್ನಡೆಸುವ ನಾಯಕ,
ಅವನಿಗೊಬ್ಬ ನಾಯಕಿ.

ಗಾಡಿ ಹೀಗೆ ಏಳೆಯುವಾಗ
ಗಾಲಿ ಒಂದು ಉರುಳಿ ಬಿತ್ತು,
ನಾಯಕನೆ ಹೊರೆಯ ಭುಜಕೆ ಇಟ್ಟು,
ಎಳೆದು ಎಳೆದು ಗಾಡಿ ಒಯ್ದ;
ಭುಜವು ಹರಿದು ರಕ್ತವೊಸರಿ
ಭಾರ ತಾಳದೆ ಬಳಲಿದೆ;
ಗಾಡಿ ಆದರೂ ಎಳೆದನು.

ಇನ್ನೊಂದು ಗಾಲಿಯೂ ಕಳಚಿ ಬಂತು,
ಬೆದರಿ ನಾಯಕಿ ಹೆಗಲನೊಡ್ಡಿ
ಗಂಡನೊಡನೆ ನಡೆದಳು;
ಕಲ್ಲು ತಗ್ಗು ದಿನ್ನೆ ನೋಡದೆ,
ಬಿಸಿಲು ಮಳೆಯ ಲೆಕ್ಕ ಹಾಕದೆ
ರಕ್ತ ತೊಯ್ದ ಮೈಯ ಕೊಟ್ಟು
ಗಾಡಿ ಇಬ್ಬರೂ ಎಳೆದರು.

ದಿನವು ಹೋಗಿ ದಿನವು ಬಂತು,
ವರ್ಷವುರುಳಿ ವರ್ಷವಾುತು,
ಬಳಲಿ ಬಾಡಿದ ಮೈಯ ಸೋತು
ಗಂಡ ಹೆಂಡತಿ ಅಳಿದರು;
ಅವರ ಆಶಾಸದನವಾಗಿ
ಮನೆಗೆ ತುಂಬ ನಗುವ ಜನರ
ಗಾಡಿ ಮುಂದಕೆ ನಡೆುತು.

ಕಾಲವಾದ ಗಂಡ ಹೆಂಡತಿ
ಕಟ್ಟಿದಂತ ಆಶಾಸದನ
ಸೂತ್ರವಾಗಿ ಕೂಡಿ ಹಿಡಿದು
ಸಂಸಾರ ಗಾಡಿ ನಡೆಸಿತು;
ಮುಖ್ಯ ತೋರಿದ ದಾರಿ ಹಿಡಿದು
ಊರಿಗೊಂದು ಮಾದರಿಯ ತೋರಿ
ಅಭ್ಯಾಸ ಬಲದಿ ಸಾಗಿತು

ಬಾಳಿನೊಳಗೆ ಬಾಳು ಮೊಳೆುತು,
ಒಂದೊಂದು ಹತ್ತಾರಾಗಿ ನಿಂತಿತು,
ಆಶಾಸದನದಿ ಬೆಸೆದ ಮಂದಿ
ಒಂದಾಗಿ ನಿಂತು ನಡೆದರು;
ಬಿರುಗಾಳಿ, ಸಿಡಿಲು, ಏರುತಗ್ಗು
ಬಿರುಕು ತೋರದೆ, ಬಿಗಿದು ಕಟ್ಟಿ
ಮುಂದೆ ಮುಂದೆ ನಡೆಸಿದುವು
ಆಶಾಸದನ ಮತ್ತೂ ಬೆಳೆುತು.

Friday, April 29, 2016
Topic(s) of this poem: home
COMMENTS OF THE POEM
READ THIS POEM IN OTHER LANGUAGES
Close
Error Success