ಕಾಮನ ಬಿಲ್ಲಿನ ತೊಟ್ಟಿಲಿನಲ್ಲಿ Poem by Praveen Kumar in Bhavana

ಕಾಮನ ಬಿಲ್ಲಿನ ತೊಟ್ಟಿಲಿನಲ್ಲಿ

ಕಾಮನ ಬಿಲ್ಲಿನ ತೊಟ್ಟಿಲಿನಲ್ಲಿ,
ತಂಬೆಲರಿನ ಹಿತಕರ ಸ್ಪರ್ಶದಲ್ಲಿ,
ತಣ್ಗದಿರಿನ ಮುಸುಕಿನ ಅಮೂರ್ತತೆ ಹೊದಿದು,
ಮಲಗಿದ ಸುಂದರಿ, ಕವಿಗಳ ರಾಣಿ.

ಬಯಕೆಯ ಸುಂದರ ವರ್ಣಶ್ವದ ಮೇಲೆ,
ರಾಜಕುಮಾರ ದೌಡುಸಿ ಬಂದ;
ಮಲಗಿದ ರಾಣಿಯ ಪಲ್ಲಂಗಕ್ಕೆ,
ಉತ್ಸಾಹದ ಬಲದಿ, ಹಾಕಿದ ಲಗ್ಗೆ.

ಎಚ್ಚರಗೊಂಡು, ಮೈಮುರಿದಳು ಚೆಲುವೆ,
ಕಣ್ಣನ್ನುಜ್ಜುತ, ಆಕಳಿಸಿ, ನಿಂದಳು;
ಕುಪ್ಪಸ, ಸೆರಗನು, ಸರಿ ಮಾಡುತ ಚೆಲುವೆ,
ಬಯಕೆಯ ಕಣ್ಣಿಗೆ ಮೈಯೊಡ್ಡಿದಳು.

ಕೊಬ್ಬಿದ ಗೂಳಿ, ರಾಜಕುಮಾರ,
ರಾಣಿಯ ಮೈಮೇಲೆ ಏರಿಯೆ ಬಿಟ್ಟ;
ಮೈಚಳಿಬಿಟ್ಟ, ಕವಿಗಳ ರಾಣಿ,
ತನ್ನನ್ನವನಿಗೆ ಬಿಟ್ಟುಕೊಟ್ಟಳು.

ಮೈ ಮೈ ಸುತ್ತಿ, ಬಯಕೆಯು ಹುರಿಗೊಂಡಿತು.
ಮೈ ಕೈ ಬಳಸಿ ಎರಡೊಂದಾುತು;
ಏರಿಳಿತದಬ್ಬರಕೆ ಹೌಹಾರಿತು ಜೀವ,
ಹೊಸಹೊಸತನ, ಹೊರ ಹರಿುತು ಹಬ್ಬಿ.

ಚಂದಿರನಿಂದ, ಸೂರ್ಯನ ವರೆಗೆ,
ನಕ್ಷತ್ರದ ಬೆಳಕಿನ ಚಪ್ಪರದಡಿಯಲ್ಲಿ,
ಬಣ್ಣದ ಕಿರಣದ, ನೂಲೇಣಿಯ ಕಟ್ಟಿ,
ಪ್ರಣುಗಳದರಲಿ ಆಡಿದರಾಟ.

ಕಲ್ಪನೆಯರಮನೆ, ಆಕಾಶಕ್ಕೇರಿತು,
ಮೂರ್ತಮೂರ್ತದ ವ್ಯತ್ಯಾಸವು ಕರಗಿತು;
ಅಣುಕಣದಲ್ಲೂ, ಬ್ರಹ್ಮಾಂಡವು ಮೆರೆುತು,
ಈ ಲೋಕವು ಸುಖದ ಸುಪ್ಪತ್ತಿಗೆಯಾುತು.
ಬಯಕೆಯ ಬಾಹು ಬಂಧನದಲ್ಲಿ,
ಭದ್ರತೆ ತೃಪ್ತಿಯ ಸುಖಸೆರೆಯಲ್ಲಿ,
ಮುಕ್ತ ಪ್ರಪಂಚದ ರುಚಿಯನ್ನುಂಡು,
ಕವಿಗಳ ರಾಣಿ, ತೃಪ್ತಿಯನ್ನುಂಡಳು.

ಪ್ರಣಯದ ಕಾವು, ಹೃಸ್ವಿಸಿ ಬರಲು,
ಬಯಕೆಯ ಬಿಗಿತವು ಸಡಿಲಿಸಿ ಬಂತು;
ಮೈಯ ಕೊಡವಿ, ಹೊರ ಬಂದಳು ರಾಣಿ;
ರಾಜಕುಮಾರನೆಲ್ಲೋ ಮರೆಯಾಗಿದ್ದ.

ಬಂಧನವಿಲ್ಲ, ಬಿಗಿತವೂ ಇಲ್ಲ,
ಕಲ್ಪನೆಗಲ್ಲಿ ಸುಖಕಾಣಿಸಲ್ಲಲ್ಲ;
ಕುಪ್ಪಸ, ಕೂದಲ, ಬಿಗಿ ಕಟ್ಟಿದ ರಾಣಿ,
ಲೋಕದ ಥಂಡಿಗೆ, ಪುನ: ಮೈಯೊಡ್ಡಿದಳು.

Friday, April 29, 2016
Topic(s) of this poem: poems
COMMENTS OF THE POEM
READ THIS POEM IN OTHER LANGUAGES
Close
Error Success