ಸಮರಸತೆ Poem by PRAVEEN KUMAR Kannada Poems

ಸಮರಸತೆ

ಸಮರಸತೆಯೆ ಸಾಹಿತ್ಯ,
ಸಮರಸತಯೆ ಸಂಗೀತ,
ಸಮರಸತೆಯೆ ಭಾವ ಸಮ್ಮಿಳನದ ಸಾವಯವ ಸಂಬಂಧ,
ಸಮರಸತೆಯ ಜೀವವಿಕಸನದ ಓಂಕಾರನಾದ.

ಸಮರಸತೆ ಸ್ಥಿರ ಕೇಂದ್ರ,
ಸಮರಸತೆ ಶಾಂತಿ,
ಅನಂತ ಪಯಣದ ಕೊನೆಯ ವಿರಾಮಧಾಮ,
ಕ್ಲೇಶ ಬಳಲಿಕೆ ತೊಳೆವ ಕೊಟ್ಟ ಕೊನೆಯ ಸಿದ್ಧಿ.

ಹಸಿವು ನೋವುಗಳಿಲ್ಲಿಲ್ಲ,
ಕ್ರಾಂತಿ ಭ್ರಾಂತಿಗಳಿಲ್ಲ,
ನಿರಾಶೆ, ನುಗ್ಗಾಟ, ದುಗುಡಗಳ ಭಯೋದ್ವೇಗ ವಿಲ್ಲ,
ಸಾಮರಸ್ಯದ ಸಮತೋಲ ಮಹದಾನಂದದ ಮೂಲ.

ಸಾಮರಸ್ಯ ಗುರುದೇವ,
ವಿಷಮ ಕ್ಲೇಶ ಮಾನವ,
ವಿಷಮ ಕ್ಲೇಶ ಹೋರಾಟದಲ್ಲಿ ಸಾಮರಸ್ಯ ಜಯಶ್ರುತಿ,
ಭೇಧ ಭಾವ ಬಿಡಿಸಿಲ ಬೆಳಕು ಸಾರಸತ್ವ ತರುವುದು.

ಮೇಲು ಕೀಳು ಕಾಲಸ್ಥಳದ
ನನ್ನ ನಿನ್ನ ಗೊಡವೆ ಬಿಟ್ಟು
ಎಲ್ಲ ತಾಳ, ಎಲ್ಲ ರಾಗ ಕೂಡಿ ಬೆರೆವ ದೇವಾಲಯ,
ಐಕ್ಯಮತದ ದಿವ್ಯ ಮಂತ್ರ ಯಾಗ ಯಜ್ಞ ಮಂಟಪ.

ಹಲವು ಸಾವಿರ ಸಣ್ಣ ತೊರೆಗಳ
ಹೀರಿ ಭೋರ್ಗರೆಯುವ ಸಾಗರ,
ಮುತ್ತು ರತ್ನ ಜೀವ ಸ್ಠೃಯ ಹೊಟ್ಟೆಯಲ್ಲಿಟ್ಟ ಸಾಗರ,
ವೈಶಾಲ್ಯದಲ್ಲಿ ವೈವಿಧ್ಯವಡಗಿದ ಗಂಭೀರ ಸರಸದ ಸಾಗರ.

ಸಮರಸತೆಯೆ ಜೀವನದ ಮೂಲ,
ಸಮರಸತೆಯೆ ಜೀವನದ ಹಾದಿ,
ಸಮರಸತೆಯೆ ಕೊನೆಯ ಸತ್ಯ,
ಸಮರಸತೆಯೆ ಈ ಅನಂತ ವಿಶ್ವ.
ಸಾಮರಸ್ಯದ ಬೀಜ, ಸಾಮರಸ್ಯದ ನಾದ,
ಸಾಮರಸ್ಯದ ಸ್ಫೋಟ, ಸಾಮರಸ್ಯದ ನಾಟ್ಯ,
ಸಾಮರಸ್ಯದಿ ಮೇಳೈಸಿ ಸ್ಠೃಸಿದೆ ವಿಶ್ವ,
ಸಮರಸತೆುಂದ ಸಮರಸತೆಯತ್ತ
ಸಾಮರಸ್ಯದಿ ಚಲಿಸುತ್ತಿದೆ ವಿಶ್ವ.

ಸಾಮರಸ್ಯವೆ ಮೂಲ, ಸಾಮರಸ್ಯವೆ ಅಂತ್ಯ,
ಸಾಮರಸ್ಯವೆ ಮೌನ, ಸಾಮರಸ್ಯವೆ ಸ್ಥಿರತೆ,
ಸಾಮರಸ್ಯದ ಗೂಢ ಸ್ಥಿತ ಪ್ರಜ್ಞತೆುಂದ
ಸಾಮರಸ್ಯದ ಗೂಢ ಸ್ಥಿತ ಪ್ರಜ್ಞತೆುಂದ
ಅನಂತ ಕತ್ತಲಿನೊಳಗೆ ಅಡಗಲಿದೆ ವಿಶ್ವ.

ಸಮರಸತೆ ವಿಶ್ವ ವಿಲಸನದ ತಂತ್ರ,
ಅನಂತ ಅನವರತ ಮುಂಚಲನೆಯ ಯಂತ್ರ,
ವಿಷಮ ಕ್ಲೇಶಗಳನಾಡಿಸುವ ಶಕ್ತಿ ಸೂತ್ರ,
ವಿರಾಟ ವಿಶ್ವದರ್ಶನದ ಮೂಲಭೂತ ಜ್ಞಾನ,
ಜ್ಞಾನಿ ತಪಸ್ವಿಗಳ ಸರ್ವಸಾಧನೆಯ ಲಕ್ಷ್ಯ,
ಓಂಕಾರ ಸ್ಫೋಟದ ಅದ್ಯಂತಾದಿ ಸ್ಠೃಕ್ರಿಯೆ,
ಓಂಕಾರ ಸ್ಫೋಟದ ಆದ್ಯಂತಾದಿ ಸ್ಠೃಕ್ರಿಯೆ,
ಓಂಕಾರ ಸ್ಫೋಟದ ಆದ್ಯಂತಾದಿ ಸ್ಠೃಕ್ರಿಯೆ.

Saturday, April 30, 2016
Topic(s) of this poem: harmony
COMMENTS OF THE POEM
READ THIS POEM IN OTHER LANGUAGES
Close
Error Success