ಬಾಲ್ಯದ ಸವಿನೆನಪುಗಳು Poem by Lokeshgouda Joladarashi

ಬಾಲ್ಯದ ಸವಿನೆನಪುಗಳು

ಬಾಲ್ಯದಲ್ಲಿ ನಾವು ಕಲಿತ ಶಾಲೆ
ನಮ್ಮ ಜೀವನದ ಮರೆಯಲಾಗದ ಸುಂದರ ಓಲೆ

ಹೊಸ ಬಟ್ಟೆಯಲಿ ಹೊರಟು ನಿಂತೆವು
ಅಮ್ಮನ ಮಡಿಲಲಿ ಅಳುವ ಕಂಡೆವು

ಅಮ್ಮನ ಕೈಹಿಡಿದು ಹೊರೆಟೆವು ಶಾಲೆಗೆ
ಎಡವಿ ಬಿದ್ದೆವು ಪೆಟ್ಟಾಯಿತು ಕಾಲಿಗೆ

ಸಮಯಕೆ ಹೊಗದೆ ನಿಂತೆವು ತರಗತಿಯ ಹೊರಗಡೆ
ನೀರು ಹರಿಯ ತೊಡಗಿತು ಚಡ್ಡಿಯ ಒಳಗಡೆ

ಒಳಗಡೆ ಕರೆದು ಎಚ್ಚರಿಸಿದ ಶಿಕ್ಷಕರು
ನೋಡಿ ನಗಲಾರಂಬಿಸಿದರು ತರಗತಿಯಲಿ ಎಲ್ಲರು

ವಿದ್ಯೆ-ಬುಧ್ಧಿ ಕಲಿಸಿದ ಗುರುಗಳು
ಸದಾ ನೆನೆವೆವು ನಮ್ಮ ಮನಸುಗಳು

ಗೆಳೆಯರ ಜೊತೆ ಆಡುತಿದ್ಡೆವು ಆಟ
ಶಾಲೆಯ ಗಂಟೆ ಹೊಡೆಯಲು ಮನೆಗೆ ಓಟ

ಅರಿಯದೆ ಮರೆತೆವು ಮನೆಯ ಹಾದಿ
ಪ್ರೀತಿಯ ಅಮ್ಮನ ನೋಡಿ ಓಡಿದೆವು ಬೀದಿ ಬೀದಿ

ನಾವೆಲ್ಲರು ಬೆಳೆಸೊಣ ಶಿಕ್ಷಕರಿಗೆ ಗೌರವಿಸುವ ಕಲೆ
ಅರಿಯೊಣ ಅರ್ಥಪೂರ್ಣ ಜೀವನದ ಬೆಲೆ

ಬಾಲ್ಯದಲ್ಲಿ ನಾವು ಕಲಿತ ಶಾಲೆ
ನಮ್ಮ ಜೀವನದ ಮರೆಯಲಾಗದ ಸುಂದರ ಓಲೆ

ಸಾಹಿತ್ಯ- ಲೋಕೇಶಗೌಡ ಜೋಳದರಾಶಿ

Saturday, March 15, 2014
Topic(s) of this poem: school
COMMENTS OF THE POEM
READ THIS POEM IN OTHER LANGUAGES
Close
Error Success