ನಡೆಸು ನಮ್ಮ ಬಾಳರಥವನ್ನ Poem by Praveen Kumar in Bhavana

ನಡೆಸು ನಮ್ಮ ಬಾಳರಥವನ್ನ

ಹೇಳದೆಯೆ, ಕೇಳದೆಯೆ, ಬರುವವಳು ನೀನು,
ಮಲಗಿದ್ದ ನಮ್ಮನ್ನು, ಎಚ್ಚರಿಸಿದವಳು;
ಮಾಗಿಯ ಚಳಿಯೆಂದು, ಒಳಗೊಳಗಡಗಿದ್ದ ನಮ್ಮ,
ವಸಂತ ಇದುಯೆಂದು, ವಾಸ್ತವಿಕಕೆ ತಂದು,
ಹೊಸ ಭಾವ, ಹೊಸ ಹರ್ಷ, ಧಾರೆ ಹರಿಸಿದವಳು.

ನಿನ್ನ ಇಹಪರಗಳೊಂದೂ, ನಮಗೆ ತಿಳಿದಿಲ್ಲ,
ಯಾವಾಗ, ಹೇಗೆ, ಬರುವೆ ಎನ್ನುವುದೂ, ಊಹೆ ಮಾತ್ರ;
ನೀನಾರೆಂದು, ನಿನಗೂ ತಿಳಿಯದ ವಿಸ್ಮಯ ಲೋಕ,
ಕತ್ತಲೆಯೊಳಗೆ ಕತ್ತಲೆಯಾಗಿ, ಬೆಳೆವ ನೀನೀಗ,
ಮುಂದಿನ ದೊಡ್ಡ ಲೋಕದ, ಚಿಕ್ಕ ಕೇಂದ್ರ ಬಿಂದು.

ನಿನ್ನಾಗಮನದ ವಾರ್ತೆ ತಂದ ಹರ್ಷ, ವಿಸ್ಮಯ, ಅಷ್ಟಿಷ್ಟಲ್ಲ;
ಆ ಸಂತೋಷ ತಂದ ರೋಚಕತೆ ನೀನು ತಿಳಿದಿಲ್ಲ;
ಎಲ್ಲೋ, ಬೃಹ್ಮಾಂಡದಾಳದ ಧೂಳಾಗಿ, ನಿನ್ನಲ್ಲೆ ನೀನಡಗಿ,
ನೋಡದ, ಲೋಕದ, ಕಾಣದಗತ್ಯಗಳ ಪೂರೈಕೆಗಾಗಿ,
ಕಾಣದ ಕೈುಂದ, ನಿರ್ಮಾಣವಾಗುತ್ತಿರುವೆ.

ಆ ಬಂಧನವೋ, ಆ ಸೇತುವೆಯೋ ಎಲ್ಲದರ ಮೂಲ,
ಆದರೆ ಅದನ್ನೆಲ್ಲ ನಿನಗೆ ತಿಳಿಯ ಹೇಳುವುದು ಕಾಲ,
ನಮ್ಮ ಲೋಕದಷ್ಟಕ್ಕೆ ಕಾಲು ಚಾಚಬೇಕಾಗಿದೆ ನೀನು,
ಇಲ್ಲಿರುವುದಷ್ಟನ್ನು ಹೀರಿ ಮೀರಿ ಬೆಳೆಯಬೇಕಾದವಳು ನೀನು,
ಅದಕ್ಕಾಗಿಯೋ ಏನೋ, ನಮಗೂ, ಈ ಆತುರ ಕಾತುರ ನೋವು,

ಬರಬೇಕಾದವಳು ನೀನು, ಬಂದು ಬಿಡು ಬೇಗ,
ಕೈಚಾಚಿ, ಬಾಚಿ, ಬಳಿ ಸೇರಿಸುವೆವು ನಿನ್ನ,
ಇದ್ದುದನ್ನು ಹಂಚಿ, ಬಾಳುವ, ಪಾಲುದಾರರು ನಾವು,
ಒಟ್ಟಾಗಿ, ಒಂದಾಗಿ, ನಡೆಸುವ ನಮ್ಮ ಬಾಳರಥವನ್ನ;
ನಮ್ಮ ಬಾಳಿನ ನಡುವೆ, ನಿನ್ನ ಕಾಯುತ್ತಿದೆ, ನಿನ್ನ ತಾಣ.

Friday, April 29, 2016
Topic(s) of this poem: memory
COMMENTS OF THE POEM
READ THIS POEM IN OTHER LANGUAGES
Close
Error Success