ಎಲ್ಲಿ ನೋಡಿದರಲ್ಲಿ ಸ್ಠೃಷ್ಠಿಯ,
ಪುಂಖಾನುಪುಂಖ, ಸಂದೇಶ ವ್ಠೃಷ್ಠಿ;
ನಿಸರ್ಗಗರ್ಭದಾಳದಿಂದ,
ವ್ಯೋಮಮಾರ್ಗದೌನ್ನತ್ಯದಿಂದ,
ಕೂಡಿ ಬರುತ್ತಿದೆ, ಸಂದೇಶ ವ್ಠೃಷ್ಠಿ.
ನಕ್ಷತ್ರಗಳ ಉದ್ದಗಲದ ಹರವಿನಿಂದ,
ಹಲವು ಲೋಕ, ನಿಹಾರಿಕೆಗಳಿಂದ,
ಅಣು, ಅಣು, ಕಣ, ಧೂಳಿನ ರಾಶಿಯಿಂದ,
ವ್ಯೋಮಮಾರ್ಗದ ನೇರ ದಾರಿ ಹಿಡಿದು,
ಸ್ಠೃ ಸತ್ಯದ ಸಂದೇಶ ಬರುತ್ತಿದೆ.
ಜೀವಜೀವಗಳ ಮೂಲವೊಂದೆ,
ಲೋಕ ನಡೆಯುವ ನಿಯಮ ವೊಂದೆ,
ಸ್ಠೃಚಕ್ರಕ್ಕೆ ಮುಂಚಲನೆ ಕೊಡುವ,
ಮೂಲಶಕ್ತಿ, ಕೇಂದ್ರವೊಂದೆ,
ಎಂಬ ಸಂಕೇತದ ಸಂದೇಶವೆಲ್ಲ.
ಈ ಸಂದೇಶ ರಾಶಿಯ, ಹೀರಿ ಹಿಡಿದು,
ನಮ್ಮ ಮುನ್ನಡೆಯ, ದಾರಿ ಕಡೆದು,
ಸ್ಠೃ ಕ್ರಿಯೆಗೆ, ಸರಿ ಮೇಳವಿಟ್ಟು,
ನಡೆಯುವುದೊಂದೆ ಬೆಳವಣಗೆ ಗುಟ್ಟು,
ಉಳಿದುದೆಲ್ಲ ತೃಪ್ತಿ, ಹೋರಾಟದ ಹುಟ್ಟು.
This poem has not been translated into any other language yet.
I would like to translate this poem