ಹಸಿರು ಮರದಡಿಯಲ್ಲಿ Poem by Sathyavathi Murthy

ಹಸಿರು ಮರದಡಿಯಲ್ಲಿ

ಹಚ್ಚನೆಯ ಹಸಿರು ಮರದಡಿಯಲ್ಲಿ
ತನ್ನ ಕೊರಳ ಇನಿದನಿ ಸರವ
ಕೋಗಿಲೆಯ ಸರಕೆ ಹೊಂದಿಸುತ
ನನ್ನಂತೆ ಸುಖವ ಬಯಸುವರೆಲ್ಲ
ಬನ್ನಿರಿಲ್ಲಿ; ಬನ್ನಿರಿಲ್ಲಿ; ಬನ್ನಿರಿಲ್ಲಿ.
ಇಲ್ಲಿ ಕಾಣೆವು ಶತೃವೊಬ್ಬನನೂ
ಶಿಶಿರ ಋತುವನುಳಿದು
ಆಸೆ ಅಮಿಷಗಳ ಬಲೆಗೆ ಸಿಲುಕದವರು
ಬಯಲ ಬದುಕ ಬಯಸುವವರು
ದೊರೆತುದನು ಉಂಬಲ್ಲಿ ಸುಖ ಕಾಣುವರು
ದೊರೆತುದಕೆ ತೃಪ್ತಿಯನು ಸೂಸುವವರು
ಬನ್ನಿರಿಲ್ಲಿ; ಬನ್ನಿರಿಲ್ಲಿ; ಬನ್ನಿರಿಲ್ಲಿ.
ಇಲ್ಲಿಕಾಣೆವು ಶತೃವೊಬ್ಬನನೂ
ಶಿಶಿರ ಋತುವನುಳಿದು

COMMENTS OF THE POEM
READ THIS POEM IN OTHER LANGUAGES
Close
Error Success