ದಾರಿಯಾವುದಯ್ಯ? ? ಗೋರಿ ಎಲ್ಲಿದೆಯೋ? ? Poem by DR.DEEPAK VISWANATH

ದಾರಿಯಾವುದಯ್ಯ? ? ಗೋರಿ ಎಲ್ಲಿದೆಯೋ? ?

ಧೂರ್ತರ ಕಪಟ ಆಟದಲ್ಲಿ,
ಹಿತೈಷಿಗಳ ಮಾತಿನ ಸುಳಿಯಲ್ಲಿ,
ಶತ್ರುಗಳ ರಣತಂತ್ರದ ಮಧ್ಯೆಯಲ್ಲಿ,
ಎಂದೆಂದಿಗೂ ಕಣ್ಣನ್ನೇ ಬಿಡದ ಆ ದೇವರು,

ತೋಚದೆ,
ಬರೀ ಅಂಗಲಾಚಿಸೋ ದಯನೀಯ ಸ್ಥಿತಿಯಲ್ಲಿ ಸಿಲುಕಿದೆನೆಯ್ಯ..
ದಾರಿಯಾವುದಯ್ಯ? ?

ಇದ್ದು, ಗುದ್ದಾಡಿ ಬದುಕಬೇಕೋ?
ಇಲ್ಲ, ಸೋತು, ನೆಲ ಸೇರಬೇಕೋ?

ದಾರಿಯಾವುದಯ್ಯ? ?
ಗೋರಿ ಎಲ್ಲಿದೆಯಯ್ಯ? ?

READ THIS POEM IN OTHER LANGUAGES
Close
Error Success