ಆ ದಿನ Poem by PRAVEEN KUMAR Kannada Poems

ಆ ದಿನ

ಅದೊಂದು ಗ್ರಹಿಕೆ ಮೀರಿದ ಸ್ತಬ್ಧಲೋಕ,
ಅದೊಂದು ದಗ್ಧ, ಭಾವಹ್ರಾಸ ದಿನ;
ಕನಸು, ಕಲ್ಪನೆ ಕತ್ತಲನಪ್ಪಿದ್ದ ಮುಸ್ಸಂಜೆ,
ಜೀವಚ್ಛವ ಕಾರ್ಮೋಡ ಕವಿದಿದ್ದ ರಾತ್ರಿ;
ತಂಗಾಳಿ ಭೀತಿಯಲಿ ದೂರ ಬೀಸಿತ್ತು,
ಕಟ್ಟಿದ್ದ ಕೋಟೆಗಳು ಮರುಗಿ ನೆಲಕ್ಕುದುರುತಿತ್ತು,
ಕಂಡ ಜನಗಳೆಲ್ಲ ಮದ್ದುಗುಂಗಿಗೆ ಸೋತು,
ಯಂತ್ರಚಲನೆ, ನಟನೆಯಲಿ ನಡೆಯುವುದ ಕಂಡೆ.

ಅಂದಿನ ಆ ಲೋಕ, ವ್ಯವಹಾರ, ದೃಶ್ಯದಲಿ
ಬರೆ ಮರೀಚಿಕೆ, ನಟನೆ, ಮೋಸವ ಕಂಡೆ;
ಮುಖಧ್ವಾರದ ಹಿಂದೆ ಹೆದರಿ ನಿಂತಿತ್ತು ಸತ್ಯ,
ಕಂಡಲ್ಲೆಲ್ಲ ಹುಳುಹಿಡಿದ ಹತ್ತಿಹಣ್ಣಿನ ಮೇಲೆ
ಸಕ್ಕರೆಯ ಕವಚ, ಕೃತಕ ಹೂಟ, ವೇಷ,
ಕಾಗದದ ಹೂವು, ಬಣ್ಣ ಬಳಿದ ಬಿಳಿ ಮೋರೆ,
ವೇಶ್ಯೆಯ ಪ್ರೀತಿ, ನಾಟಕ ಖಳನಾಯಕನ ಕಂಡು
ನನ್ನನ್ನು ಬದಿಗಿಟ್ಟು ನಾನು ನಟನೆಗೆ ರಂಗಕ್ಕೆ ಬಂದೆ.

Wednesday, July 12, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success