ಆಂದು ಹೊಂಬಿಸಿಲು ಬಾಚಿ ಸವರಿ
ಹಸಿರು ರಂಗುರಂಗಿನ ಹೊದಿಕೆಯ ಚಾಚಿ
ಮುಕ್ತ ಮಾಧುರ್ಯದ ಕೈ ಗಳ ಬೀಸಿ ನಿಮಿರಿ
ನಿoತ ಈ ಕಣಿವೆಯ ಸೊಬಗನು ಗೀಚಿ
ಬರೆಯಲೇ ಕಪ್ಪು ಮಸಿಯ ಉಕ್ಕಿನಲಿ..;
ಇಲ್ಲ, ನಾನೇ ಮೊದಲಿಗಳೆoದು ಸೊಕ್ಕಿನಲಿ
ಬಿಂಕದ ಕತ್ತು ಕೊoಕಿಸಿ ನಲಿಯಲೇ.......?
ತೇಲುವ ಕೆರಿಮೋಡಗಳ ತುಂಟಾಟದ ಪ್ರೊಷಣೆಗೆ
ನಸು ನಗುವಿನಲಿ ನಲುಗಿ, ಚಿಮ್ಮಿ ಅರಳಿರುವ
ವನಸಿರಿಯ ನೆಮ್ಮದಿಯ ಈ ಘೋಷಣೆಗೆ
ಮನಸೋತು ಕತ್ತು, ಕೈ, ಕಣ್ಣುಗಳಿಗೆ ಮರಳಿರುವ
ಚಿಮ್ಮು - ಚೇತನದ ಸೆರೆಳಿವಿನಲಿ ಕೋಗಿಲೆಯ ಮರೆ
ಹಾಡಿನಂತೆ, ಉತ್ಕರ್ಷ್ದದ ಆನಂದ ಲಹರಿಯ ಸೆರೆ
ಬಿಡಿಸಿ ಹರಿಬಿಡಲೆ ಮೂಡಿಬರುವ ನವರಾಗದ ಅಲೆಗಳ…...?
ಮುಗಿಲ ದಾರಿಯಲಿ ಮೆರಗಿ ಮೆರೆಯಾದ ರವಿಯ
ಹಿಂದೋಡಿ, ಹಿಗ್ಗಿ ಹಾರುವ ಮಂಜನ ಹೊರೆಯ
ಚಿಮ್ಮು - ಚಿತ್ತಾರಗಳ ಹೆಣೆವ ಮಧುರ ಸವಿಯ
ಈ ತಗ್ಗು ಬಗ್ಗುಗಳ ಜೀವನಾಡಿಯ ನೆರೆಯ
ಎನಿತು ಬಣ್ಣಿಸಲಿ; ಇಲ್ಲ... ಸವಿದು ಕುಂಚಗಳ
ಹರಿಬಿಟ್ಟು ಮೂಡಿಸಲೇ ಖಾಲಿಪಟದ ಒಳ ಅಂಚುಗಳ
ತಿಳಿ ಕುಬ್ಜ ಪ್ರತಿ ರೊಪಗಳಲಿ, ಅನುಕರಿಸಿ.......?
ಇಂದು, ಬೆಟ್ಟ ದಡಿಯ ಬಯಲಲಿ ಮೄತ್ಯು ನಿಖರತೆ --
ಗುಟ್ಟು ಸುತ್ತಿರುವ ಅಂತ್ಯ ಸಾರುವ ದಟ್ಟ ಕೂಪ
ಸಾವು ನೋವುಗಳ ಹಿಂಡಿ ಹಿಪ್ಪೆಯ ನೀರವತೆ,
ಕೊನೆ ಕಾಣದ ಈ ಭಯದ ಕ್ಷೀಣ ಗಳಿಗೆಯ ಶಾಪ;
ಮುಖವಾಡದ ಮುಖಗಳ ಸಂಸ್ಕಾರ ವಿಲ್ಲದ ದೇಹಗಳ
ಕಡಿದು ತುಂಡಾಗಿರುವ ಸಂಬಂಧ - ಸರಪಳಿಗಳ, ನೇಹಗಳ
ವಿಕಾರ ಚಿತ್ಕಾರಗಳ ಬಣ್ನಿಸಲುಳಿದಿರುವ ಬಣ್ನಗಳು: ಕಪ್ಪು -ಬಿಳುಪು
This poem has not been translated into any other language yet.
I would like to translate this poem