ಯಾವ ಮಾತು ಮೇಲು:
ಚೀರಿ, ಕೀರಿ ಆತಂಕ
ಮೂಡಿಸುವ, ಕೂಸು ಆಡುವ
ಮುರಿದ ಸರಣಿಯ ತೊದಲು......;
ಬಾಲ್ಯದ ಬಡಬಡಿಕೆಯ ಟೊಳ್ಳು
ಅರ್ಥವಿಲ್ಲದ ಹಮ್ಮಿಗೆ ಶಬ್ದಗಳ ತಡಿಕೆ....;
ಉಕ್ಕುವ ಪ್ರಾಯದ, ಹಿಡಿತ ವಿಲ್ಲದ,
ಭಾವಾ ವೇಶದಲಿ ತಪ್ಪಿ ಆಡಿದ,
ಆಡಿ ತಪ್ಪಿದ ಅತಿರೇಕದ ಮಿಥ್ಯ;
ಸಾಧಿಸದೇ ಉಬ್ಬಿ ಆಡುವ
ಅನರ್ಹ ಸ್ಥಿತನಾಗಿ ಕಾಡುವ, ಬೇಡುವ
ಅಧಿಕಾರದ ರಹದಾರಿಗಾಗಿ ಚಾಚುವ,
ಅಲ್ಲಸಲ್ಲದ ತಪ್ಪುಗಳ ಕ್ಷಮೆಗಾಗಿ ನಾಚುವ,
ಆದಿ - ಅಂತ್ಯ ಗಳೇ ಇಲ್ಲದ
ಮೃದು ಮೌನಳ ಕೆನ್ನೆಗೆ ಬಾರಿಸು ವಂತಹ
ಉದ್ಧಟ ಉದ್ಧಿತ ಮಾತು.....?
This poem has not been translated into any other language yet.
I would like to translate this poem