ಶಿಶುವಿನ ಶೂನ್ಯ ದೃಷ್ಟಿಯ
ಮುಗ್ಧ ಎಸಳು ನಗೆ
ಜನಕರ ತು೦ಬು ಆನಂದ;
ಗೊಂದಲದ ಅಸ೦ಬದ್ಧ ವದನ
ಬಾಲ್ಯದ ನಗುವಿನ ಪದರ;
ಆಸೆ - ಭಯಗಳ ವಿಕಾಸ
ಯೌವನದ ಪೊಳ್ಳುನಗೆಯ ಅಡಕ,
ಹುಸಿ ಗೀರುಗಳ ತೀಡು ನಗೆ
ಸ್ವಾರ್ಥಿ - ಭ್ರಷ್ಟರ, ಕೇಡು - ಬೇಡಿನ
ನೀರಗುಳ್ಳೆ ಯ೦ತಹ ನಗೆ;
ವಿಕಾರ, ಅನಂತ ನಗೆ
ಮೃತ್ಯು ಸವರಿದ ಮುಖದ
ನಯನಗಳು ಸಾರುವುದೇನು:
ತಿಳಿದೂ ತಿಳಿಯದ ಈ ಪರಿಯ ಆಯಾಮ
ಹುಸಿ ನಗೆಯ ಬೆಂಬಲಿಸಿ
ಕಡೆಗಣಿಸಿ ಸಾಗಲೆ..........ಇಲ್ಲ ,
ಕಂಡೆಲ್ಲ ಈ ಭಾವಗಳ
' ಸೆಲ್ಫಿ ' ತೆಗೆದು 'ಆಲ್ಬಮ್ ' ಗೆ ಭರಿಸಿದರೆ೦ತು
' ಕ್ಲಿಕ್ ' ನೋಂದಿಗೆ.........! ?
This poem has not been translated into any other language yet.
I would like to translate this poem