ಅತೃಪ್ತ ನಾಗರಿಕ. Poem by Vidya Pandarinath

ಅತೃಪ್ತ ನಾಗರಿಕ.

Rating: 5.0

ಹಿಂದೊಮ್ಮೆ ಗೂಡು ಬೀಡಾ ಗಿದ್ದ ಗುಹೆಯ ತಾಣ

ತೊರೆದು ಕಾಡನ್ನು ದಾಟಿ ಬಂದ

ನವ ನಾಗರಿಕ ಅದೆಂತು ಮರೆತನೋ ಜೌಣ

ಚೆಲುವಿನ ಪ್ರಕೈತಿಯ ಆ ಋಣವನ್ನು

ತೋರಿಸಿಯೇ ಬಿಟ್ಟ ತನ್ನ ಗುಣವನ್ನು

ತೊರೆದು ಸಹ ಜೀವಿಗಳ ಕೂಪ

ಮರೆತಿಹನು ಸ್ವಾರ್ಥಿ ಈ ಭೂಪ

ಹಸಿರ ಕಡಿದು ಉಸಿರು ಕಟ್ಟುವ

ಹರಡಿ ಕಲ್ಲು ಮಣ್ಣಿನ ವಿಚಿತ್ರ ಆಕಾರಗಳ,

ಹುಬ್ಬನೇರಿಸಿ ನಿಂತಿಹನು ಮಡಚಿ ಕರಗಳ

ಶಿಲೆ ಯಲ್ಲಿ ಕಾಣುವ ಭಯದ ಭಕ್ತಿ ಯ ರೂಪ

ಕಾಣಲಿಲ್ಲವೆ: ಬಂಡೆ, ಬೆಟ್ಟ ಗಳ ಕಡಿದು ಕೀಳಿ

ಗೊಳಿಸಿದಾಗ ವಿಕಾರ ವಿಕೃತ, ಅಶ್ವಸ್ಥ - ಸೀಳಿ;

ನದಿಗಳ ನು ತಡೆದು ಕೊಳಚೆ ಯ ಬೆರೆಸಿ

ಮುಕ್ತ ನೀರನು ಮಾರಿ, ಜಾಹೀರಾತು ಗಳ ಸಾರಿ

ಹಲ್ಲು ಕಿರಿದು ನಿಂತಿಹನು, ಉದರಸವರಿ;

ಕೆರೆಗಳ, ಹಳ್ಳದಿಣ್ಣೆಗಳು ಆದವು ಮಾಯ

ಬೇರುಗಳಿದ್ಧಲ್ಲಿ ನೆಟ್ಟ ಕಂಬಗಳು, ಅಡಿಪಾಯ

ಧರೆಗಿಳಿದ ದೇವನಿಗಿಲ್ಲ ಇಲ್ಲಿ ನಿಲ್ಲಲು ಜಾಗ

ಕರೆದಾಗ ಬಂದು ಹೋಗ ಬೇಕಷ್ಟ ಇಲ್ಲಿ

ಹಬ್ಬ- ಹುಣ್ಣಿಮೆ ಗಳ ಪಂಚಾಂಗದ ಹಂಗಿನಲ್ಲಿ;

ಕಸಿದು ಕಿತ್ತಿ ವನುಾ ಬೇಕೆ ಎಲ್ಲ ವನು:

ಶ್ರಮ ಜೀವಿ ಕೀಟಗಳ ಜೇನು, ಸಾಗರ ಡಡಿಯ ಹವಳ -ಮುತ್ತು

ಅಲೆಗಳ ಕ್ಷಾರ, ಹಿಂಡಿ ಹೀರುವ ಕಬ್ಬಿನ ಸಾರ!

ಕೋಟಿ, ಗೋಪುರ ಮಹಲುಗಳ ಕಟ್ಟಿ

ಬಾಳದೇ ತುಂಡು ನೆಲದಲ್ಲಿ ಮಾಣ್ಣಾದವರ ಪಟ್ಟಿ

ಚಿಕ್ಕದೇನಿಲ್ಲವಲ್ಲ ಕಾಣು ಅತೃಪ್ತ ನಾಗರಿಕ....!

POET'S NOTES ABOUT THE POEM
Kannada poem about modern deterioration in lifeThe worshipper of a stone idol fails to see it's sanity in the hills and rocks, Even the God unless he descends at the call in keeping with the calendar finds no place here For civilized living man has exploited Nature-rocks, hills, the ocean for salt, pearls, coral, denying place for God
COMMENTS OF THE POEM
READ THIS POEM IN OTHER LANGUAGES
Close
Error Success