ಪ್ರೇಮ ಕಥೆಗಳು Poem by Lokeshgouda Joladarashi

ಪ್ರೇಮ ಕಥೆಗಳು



ಸತ್ತ ಮನಸಿನ ಮನೆಯಲ್ಲಿ ಕಣ್ಣೀರಿನ ಕನಸುಗಳು
ಹೆತ್ತ ಕರುಳಿನ ಕುಡಿಯಲ್ಲಿ ಬೆಂಕಿಯ ಕೆಂಡಗಳು

ಕಣ್ಮರೆಯಾದ ಅವಳ ಚಿತ್ರದಲ್ಲಿ
ಜೊಡಿಸಲಾಗದೆ ಒಡೆದ ಚೂರು ಚೂರು ನೆನಪುಗಳು

ಆ ನೆನಪುಗಳ ಅಡಿಯಲ್ಲಿ
ಅಳಿಯದೆ ಉಳಿದ ಭಾವನೆಗಳು

ಸುರಿಯುವ ತುಂತುರು ಮಳೆಯಲ್ಲಿ
ಕೊಡೆ ಹಿಡಿಯದೆ ನೆನೆದ ಮೈಮನಗಳು

ಉರಿಯುವ ಬಿಸಿಲಿನಲ್ಲಿ
ನೆರಳಾದ ನಿನ್ನ ಕೈಗಳು

ಮುಂಜಾನೆಯ ಇಬ್ಬನಿಯಲ್ಲಿ
ಜೊತೆ ನೆಡೆದ ಹೆಜ್ಜೆಯ ಗುರುತುಗಳು

ಮುಸ್ಸಂಜೆಯ ಮುಸುಕಿನಲ್ಲಿ
ಜೊತೆ ಬಿಡದ ನೋವು ನಲಿವುಗಳು

ನೀ ಇಲ್ಲದ ಬದುಕಲ್ಲಿ
ಸಮಯ ಕಳೆಯದ ದಿನಗಳು

ನನ್ನ ಮನೆಯ ಮನದಲ್ಲಿ
ನಿದ್ದೆ ಬರದ ರಾತ್ರಿಗಳು

ನಿನ್ನ ಸೇರುವ ಆಸೆಯಲ್ಲಿ
ಹಾತೊರವ ನನ್ನ ನಯನಗಳು

ನಿನ್ನ ಬಾಹುಬಂಧನದಲ್ಲಿ
ಕೊನೆಯ ಉಸಿರು ಹಸಿರಾದ ಕ್ಷಣಗಳು

ಸಾವಲ್ಲು ಮೆರದ ಜೀವಾತ್ಮಗಳು
ನೋವಲ್ಲು ನಗುವ ಪ್ರೇಮ ಕಥೆಗಳು

ಸಾಹಿತ್ಯ-ಲೋಕೇಶಗೌಡ ಜೋಳದರಾಶಿ

Wednesday, November 27, 2013
Topic(s) of this poem: love
POET'S NOTES ABOUT THE POEM
A story of 2 persons born and brought up together. Boy and girl use to spend their most of the time together since childhood. An unbreakable love takes birth between them at the age of 15 and builds up to great height. Time plays a cruel role in their life and at the age of 24, girl passed away with her last breath in the hands of boy. Boy couldn't able to feel her absence all the way and express his and her mother feelings on this situation. He starts living his life with the memories of their love. When he doesn't find any reason to live further, He joined her at the age of 62 due to lack of hopes in physical living.
COMMENTS OF THE POEM
READ THIS POEM IN OTHER LANGUAGES
Close
Error Success