ಕಾಲೇಜ್ Life Poem by Lokeshgouda Joladarashi

ಕಾಲೇಜ್ Life

ಮೊದಲನೆಯ ದಿನದ Collegeನ ಹೊಸ ಹೊಸ ಮುಖಗಳು
ಹುಡುಗ ಹುಡುಗಿಯರ Hostelನ ಹಳೆಯ ರೂಮುಗಳು

ಕಾಲೇಜಿನ Boring ಪಾಠಗಳು
ಕಳ್ಳತನದಲ್ಲಿ ದಿನನಿತ್ಯದ Department ರಿಜಿಸ್ಟರನಲ್ಲಿ ಸ್ಯೆನುಗಳು

ಬರೆದು ಬರೆದು ಕೈಸೋತುಹೋದ Assignmentಗಳು
ಅದರಿಂದ ಹೆಮ್ಮೆಪಡುವ ನೂರೆಂಟು ಸಾಧನೆಗಳು

ದಿನಕ್ಕೊಮ್ಮೆ ದಣಿದಾಗ Tea Cofeeಗಳು
ಅದರ ನೆಪದಲ್ಲಿ ಹುಡುಗಿಯರತ್ತ ನೋಡುವ ಕಣ್ಣುಗಳು

ಮೊದ ಮೊದಲು ಸಂಕೋಚದ ಹೊಸ ಹೊಸ ಪರಿಚಯಗಳು
ದಿನ ಕಳೆದಂತೆ ಪರಿಚಯ ಪರಿಚಯಿಸಿದ ಪ್ರೀತಿ ಸ್ನೇಹಗಳು

ವರದೊಳಗೋಮ್ಮೆ ಊರು ಸುತ್ತುವ ಹುಡುಗರ ಶೋಕಿಗಳು
ಹುಡುಗಿಯರ ಜೊತೆ ಸುತ್ತಲಾಗದ Shopping Mallಗಳು

ತಿಳಿದೋ ತಿಳಿಯದೆ ಕೋಪದಿ ನುಡಿದ ಪದಗಳು
ವ್ಯಕ್ತಿತ್ವಕ್ಕೆ ಬೆಲೆ ಕೋಡದ ಮನಸ್ತಾಪಗಳು

ಎದುರು ಬದುರು ಕೂತು ನೋಡಲಾಗದ ಮುಖಗಳು
ಸಮಯಕ್ಕೆ ಸೋತು ಒಡೆದು ಹೋದ ಮನಸುಗಳು

ತಪ್ಪು ಒಪ್ಪುಗಳು ಅರೆತರು ಅಡ್ಡಬರುವ ಒಣ ಸ್ವಾಬಿಮಾನಗಳು
ಎಲ್ಲೋ ಒಂದು ಕಡೆ ಮತನಾಡಿಸಬೆಕೆಂಬ ಆಸೆಗಳು

ಜೀವನದ ತಿರುವುಗಳಲ್ಲಿ ನೋವು ನಲಿವುಗಳು
ಸದಾ ಇರಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆಗಳು

ಸಾಹಿತ್ಯ-ಲೋಕೇಶಗೌಡ ಜೋಳದರಾಶಿ

Saturday, March 15, 2014
Topic(s) of this poem: friendship
COMMENTS OF THE POEM
READ THIS POEM IN OTHER LANGUAGES
Close
Error Success