ಮರೆಯಾದ ಮಾಣಿಕ್ಯ- ನನ್ನಪ್ಪ! ! ! Poem by DR.DEEPAK VISWANATH

ಮರೆಯಾದ ಮಾಣಿಕ್ಯ- ನನ್ನಪ್ಪ! ! !

ಅಪ್ಪ ಇದ್ದಾಗ ನಂದು ನಿತ್ಯ ಉಡಾಫೆ
ಅಪ್ಪ ಸತ್ತ ಮೇಲೆ ನಾನು ಊರಾಚೆ..

ಅಪ್ಪ ಇದ್ದಾಗ ದಿನ ನಿತ್ಯ ಅವನ ಭೋಧನೆ
ಅಪ್ಪ ಸತ್ತ ಮೇಲೆ ನಿಲ್ಲುತ್ತಿಲ್ಲ ನನ್ನ ರೋಧನೆ..

ಅಪ್ಪ ಇದ್ದಾಗ ಮಡಿದ ತಪ್ಪಿಗೆ ಶಿಕ್ಷೆ/ದೀಕ್ಷೆ ಕೊಟ್ಟು, ತಿದ್ದುತ್ತಿದ್ದ
ಅಪ್ಪ ಸತ್ತ ಮೇಲೆ ಜೀವನವೇ ಭಿಕ್ಷೆ ಬೇಡೋ ಹಾಗಾಗಿ ಬಿಟ್ಟಿದೆ, ತಿದ್ದೋರು ಯಾರೂ ಇಲ್ಲ, ಬರಿ ಗುದ್ದುವವರೇ..

ಅಪ್ಪ ಇದ್ದಾಗ ನನ್ನ ಹಾದಿ ಸುಗಮವಾಗಿತ್ತು
ಅಪ್ಪ ಸತ್ತ ಮೇಲೆ ನನ್ನ ವ್ಯಾಧಿ ಆರಂಭವಾಯ್ತು..

ಅಪ್ಪ ಹಾಕಿದ್ದ ಆಲದ ಮರವು ನನಗೆ ನೆರಳು ಕೊಡುತ್ತಿತ್ತು
ಅಪ್ಪ ಸತ್ತ ಮೇಲೇ ನನಗೆ ಕುಲದ ಕೊರಗು ಕಾಡುತ್ತಿದೆ..

ಅಪ್ಪ, ಎರಡಕ್ಷರ, ಆದರೆ ಆತ ಬದುಕಿದ್ದಾಗ ನಮ್ಮ ಜೀವನ ಸಾಕ್ಷಾತ್ಕಾರ
ಅಪ್ಪ, ಎರಡೇಕ್ಷರ, ಆದರೆ ಆತ ಇಲ್ಲದಿರುವಾಗ ನಮ್ಮ ಜೀವನವೇ ಹಾಹಾಕಾರ..

ಈಗ ನನ್ನನ್ನು ತಿದ್ದಿ, ಬುದ್ದಿ ಹೇಳೋರು ಯಾರು?
ಎಲ್ಲಿದ್ದೀಯೋ ನೀ ಅಪ್ಪನೇ?

- ದೀಪಕ ವಿಶ್ವನಾಥ

POET'S NOTES ABOUT THE POEM
ಅಪ್ಪನ ನೆನಪು
READ THIS POEM IN OTHER LANGUAGES
Close
Error Success