ಪಯಣ ವೇಂಬ ಜಾಡು..! Poem by Vidya Pandarinath

ಪಯಣ ವೇಂಬ ಜಾಡು..!

ಕಿರು ಬೇರಳ ಗಾತೃ ದ ಕಿರಿಯ ಕಾರಂಜಿಯಲಿ ಚಿಮ್ಮಿ ಚಿಮ್ಮಿ ತುಂಬಿ ತುಳುಕಿ ಹರಿದುರುಳಿ ದಾರಿ ಕಂಡು ಹೋಮ್ಮಿ
ಹೊಸ ಬಯಲಲಿ ಹೊರಳಿ ಹೊಮ್ಮಿ, ಸಾಗರದ ಜಾಡು
ಹೊಕ್ಕಿ ಪಯಣ ಮುಗಿಸುವ ನದಿ ಯಂತಹ ಪಾಡು...
ಈ ಮನು ಜೀವನದ ಮೂಲ-ಅಂತ್ಯದ, ಸ್ಪರೂಪ!

ಮೇಘಗಳ ಕೂಟಕ್ಕೆ ತಂಬೆಲರ ಸೋಂಕಿನ ಮುಕ್ತಿ,
ಧರೆಗಿಳಿದ ಹನಿಗಳ ಜಾಡು ನದಿಯಲ್ಲಿ ಮರೆಯಾಗಿ,
ಮುಗಿಲಪಯಣದ ಹೊಸ ರೂಪದ ಹಂತವಾಗಿ
ಹನಿಗಳಲಿ ಬೆರೆತು ಮುುಂದೆಸಾಗುವಂತಹ ಯುಕ್ತಿ
ಎಂದೂ ಕೊನೆ ಕಾಣದ, ನಿಲ್ಲದ, ಸಾಗು ಪಯಣ

ಸಾಗರದ ಸ್ವಾಗತ, ಜಡ ತಳದ ಜೀವಿಗಳ ಸೋಂಕು;
ಮೇಲಾಕಾಶದ ಛಾಯೇ, ತಿರುಗಿ, ತಿರುಚಿ ಸೀಳುವ
ಅಲೆಗಳ ಕಡಿದಾಟದಲಿ, ಮುಳುಗಿ ಎದ್ದೆದ್ದು ಬೀಳುವ,
ದಾರಿ ತಪ್ಪಿದವರನು ಸದಾ ಕವಿಯುವ ಆ ಮಂಕು!
ಆಳ ಪಾತಾಳ ಗಳ ಹೊಕ್ಕ ರೂ ಸಂಘಷ೯ವೇ ದಿಟ

ಅಂತೂ ಪಯಣದ ಹಾದಿಗೆ ಈ ಮುಗಿಯದ ಗೀಳು,
ಕೊಸರಾಟ, ಗೊಂದಲದ, ಉಸಿರಾಟ ನಿಲ್ಲಿಸುವ,
ಎಲ್ಲಾಪರಿಯ ದ್ವಂದ್ವ ಕ್ಕೂ ಸರಿತೂಗುವ, ಸಲ್ಲಿಸುವ
ಕೊನೆಗೆ ಲೀನವಾಗಿ ಮುಗಿಯಿತು ಎನ್ನುವ ಬಾಳು;
ಗುರುತು ಸಿಗದ ಸಾಗರದೀ ಸಂಕೇತಗಳ ಹುಡುಕಿದಂತೇ...!

ಪಯಣ ವೇಂಬ  ಜಾಡು..!
Tuesday, July 14, 2026
Topic(s) of this poem: journey,life,lessons of life
POET'S NOTES ABOUT THE POEM
The Path Called Journey) , metaphorically compares human existence to a river's journey to the sea, illustrating life's cyclical nature from a small beginning to its eventual merging into a greater whole. It explores themes of inevitable struggle, the blending of, and the ultimate dissolution of earthly struggles into a final, tranquil state of oneness.
COMMENTS OF THE POEM
READ THIS POEM IN OTHER LANGUAGES
Close
Error Success