ಒಡಲಿನಾಳದಲಿ ಕಡಿದು ಕದಡುವ ಕೋಪ,
ತಾಪದ ರೂಪವೇ ಈ ಘೋರ ಅಲೆಗಳ ಕುಣಿತ
ಇಲ್ಲ, ವಿಚಿತ್ರ ಏರಿಳಿತಗಳ ಬೇದರಿಸುವ ರೂಪ..
ಯಾರನು, ಮಣಿಸುವ, ತಣಿಸುವ ಲಯ ಗುಣಿತ!
ಅಬ್ಬರದ ಕುಳಿತ, ಮುಗ್ಧ ಬಂಡೆಗಳ ಮೇಲೆ
ಎತ್ತಿ ಮೇಲೆತ್ತಿ ಹೇಡೇಗಳಾಗಿ ಎತ್ತರಕ್ಕೆ ಚಿಮ್ಮಿ
ಏರಿಸಿ, ತಿರುಗಿಸಿ ಹೋಮ್ಮಿ ಬಡಿಯುವ ಅಲೆ
ಅದಾವ ಸೂಪ್ತ, ಕಾಣದ ಅಣಕು ಆ ಬಿಮ್ಮು?
ಮುಳುಗುವ ದಿನಕರನ ಹೊಂಬಣ್ಣದ ಮುಗುಳು,
ಮರಳಿ ಹಾರಿ, ಕೀರಿ ಹಿಂತಿಗುವ ಹಕ್ಕಿಗಳ ಹಿಂಡು,
ತೃಪ್ತಿ, ಸಂತಸದೀ ಎಲ್ಲಾ ಸೇವಿಸಿ, ಬಿಡದೇ ಒಂದಗಳು
ಚೆಲುವಿನ ಚಿತ್ತಾರ ದ ಮೇಲೆ ಮೂಡಿಸಿರುವ, ಕಂಡು!
ಅಲ್ಲೋಲ ಹರಿದಾಟದಾ ಕದಡುವ ನವನೀತ ವೋ,
ಯಾ, ಆನಂದ- ಹೆಮ್ಮೆಯ ಅತಿ ರೂಪದ ಅಟ್ಟಹಾಸ,
ಅಡಗಿಹ, ಅಪರೂಪದ ಒಂದು ಅಭಿವ್ಯಕ್ತ ರೂಪವೋ;
ಅಂತೂ, ನಿನ್ನದೂ ಒಂದು ಪ್ರಕೃತ ಭಾಷೆ ಯ ವಿಕಾಸ!
This poem has not been translated into any other language yet.
I would like to translate this poem