ವಿಧಿ ವಿಚಿತ್ರ...! Poem by Vidya Pandarinath

ವಿಧಿ ವಿಚಿತ್ರ...!

ಹುಬ್ಬು ಗಂಟಿಕ್ಕಿ ಕತ್ತು ಕೊಂಕಿಸಿ ಅಂದಳು ವಿಧಿ:
' ನನಗೆ ಎಂದೂ ಇಂತು ತೊಡಕಾಗದಿರು ತಮ್ಮ,
' ವಹಿಸಿರುವನು ಜೀವಿಸಿದ್ದಿಯ ಕೊನೆಗಾಣಿಸಲು ಬ್ರಹ್ಮ
' ನಿನಗೆ ಸಲ್ಲದ ವಲಯವಿದು, ನಿನಗಿಲ್ಲ ಇಲ್ಲಿ ಅವಧಿ '
ತುಂಟ ಮುಗುಳ್ನ ಗೆ ಚೆಲ್ಲಿ ನಯನಗಳ ಮಿಟುಕಿಸಿದ ವಿಚಿತ್ರ;
ಸಂತೆಯ ಬಿಗುತಾಣದಲ್ಲಿ ಕೂಡಿ ಬೀಡುಬಿಟ್ಟಿತ್ತು
ಪ್ರಾಣ - ಪ್ರಾಣಿ ಗಳ ರಂಗು ರಂಗಿನಾಟ, ಡೊಂಬರಾಟ;
ಸಿಕ್ಕೆಲ್ಲ ವಸ್ತುಗಳ, ಸಿಗದಿರುವ ಉಡುಗೆ ಗಳ ಮಾರಾಟ
ಸರಳ ಸರಪಣಿ ಗಳ, ಭರಭರಾಟಯ ಉಸಿರಾಟ,
ಕೊಳ್ಳು ವ, ಮಾರುವ, ತಿನ್ನುವ ತಿನ್ನಿಸುವ ಕೂಟ
ಈ ನಡುವೆ ಗೂಳಿ ಗಳೆರಡು ನುಗ್ಗಿ ನಡೆ ಸಿದವು
ತಲೆ- ಕೊಂಬಿನ ತಳ್ಳು -- ನೂಕುವ ಜೋಡಿ ಹೋರಾಟ;
ಅತ್ತಿತ್ತ ಸರಿದು ಬಿದ್ದುಎದ್ದು ಓಡಿ ದವರು ತಿರುಗಿ
ದೂರ ನಿಂತರು: ಉಚಿತ ಹುಮ್ಮಸ್ಸಿ ನ ತೀಪು೯ಗಾರರಾಗಿ
ಸೆಟೆದು ಕಾಲ್ಗೆದರಿ ನುಗ್ಗಿದ ಒಂದು ಮದಗೂಳಿ ಎತ್ತಿ ತಿರುಗಿಸಿ,
ಅಷ್ಟದಶಕ ಗಳು ದಾಟಿದ ಹಗುರು ಹಿರಿಯನ, ಚಿಮ್ಮಿಸಿ,
ರುದ್ರ - ಭಯಮೂಡಿಸಿತು, ಗುಂಪು ಗುಚ್ಚದ ಆವರಣದಲಿ; ಮೇಲ್ಹಾರಿದ ವೃದ್ದ ಎರಗಿದ್ದ ದಿನದ ಬಾಹುಬಲಿ ಪಟ್ಟದಲಿ
ಗೆದ್ದು ಮಿಂಚಿದ, ಅಟ್ಟರಾಜು ವಿನ ಮೇಲೆ;
ಎಲ್ಲ ದಿಟ್ಟ ಪಟ್ಟು ಬಲ್ಲವನು ಪಕ್ಕಹಾರಿದ್ದ;
ಹಲ್ಲಿಲ್ಲ ದ ಬಡಪಾಯಿ ನಿಂತು ಮುಗ್ಧ ನಗುಬೀರುತ್ತಿದ್ದ;
ಮಲ್ಲ ಪಟು ಆಯ ತಪ್ಪಿ, ಇದ್ದ ಲ್ಲೇ ಪ್ರಾಣ ಬಿಟ್ಟಿದ್ದ....!
ಕೆಂಡ ಮುಖದ ವಿಧಿಗೆ, ನುಡಿದು ವಿಚಿತ್ರ ಮುಗುಳ್ನಕ್ಕ:
'ನಾನು ಗಾಂಭಿರ್ಯ ಕ್ಕೆ ಮೋಜಿನ ಮೆರಗಿಟ್ಟಿದ್ದೇನಷ್ಟೇ ಅಕ್ಕ'

Thursday, June 8, 2023
Topic(s) of this poem: fate
POET'S NOTES ABOUT THE POEM
Kannada poem about Luck And Fate
COMMENTS OF THE POEM
READ THIS POEM IN OTHER LANGUAGES
Close
Error Success