ಕಲಾ ಜ್ಞಾನಿ...! Poem by Vidya Pandarinath

ಕಲಾ ಜ್ಞಾನಿ...!

ಕಿರು ಡಮರು ಕುಣಿಸಿ, ಕೆಂಪು ಕರವಸ್ತ್ರ ತೇಲಿಸಿ
ಕೋಲು ಮೊಗ, ಒಣಕಲುದ ದೇಹದ, ಜೋತು ನಡೆಯ
ಬುಡ ಬುಡಿಕೆ ಯವನೊಬ್ಬ ಇಂತೆಂದೆ:
'ಊರು ಉರಿದು ನಾಡುತೇಲಿ ಹೋಗಲಿದೆ;
'ಪಡುವಣಕೆ ತಿರುಗಿ ನೆಲೆಕಾಣಿರಿ: ಡಿಟವಾಣಿ - '
ದಾನದೇಣಿಗೆಯನು ಜೋಳಿಗೆಗೆ ಸುರಿದು,
ಆವೇಶ ಆದೇ ಶವಾಗಿಸಿ, ತಲೆಅಲ್ಲಾ ಡಿಸುತ
ತಿರುಗಿನೋಡದೇ ಸರಸರನೆ ನಡೆದಿದ್ದ;
ಬೆಚ್ಚಿಬಿದ್ದ ಅವರು -ಇವರು, ಅಲ್ಲಿ- ಇಲ್ಲಿ ನಿಂತವರು
ಅತ್ತ- ಇತ್ತ ಓಡಾಡಿ, ಎಲ್ಲೆಂದರಲ್ಲಿ ಸೇರಿ -
ಸುರಿದರು ಹುಚ್ಚು ಕಲ್ಪನೆ ಯ ಮೂಟೆ ಯೊಳಗಿನ
ಚಿತ್ರ ವಿಚಿತ್ರ ದಿಗ್ಭ್ರಮೆಯ ಸುರುಳಿ ಗಳನು....!



ಕಾಲ್ಗೆ ದರಿ ಕಾಳ ಹುಡುಕುವ ಕೋಳಿ ಗಳಂತಾದರು: ಉಳಿದವರು
ಹಗಲು ಉರುಳಿ ಇರುಳ ಹೊದಿಕೆಯ ಬಿಟ್ಟು
ಮಾಯವಾದ ಬೆಂಕಿ ಚೆಂಡಿನ ಆದೇ ದಿನಕರ
ಮರಳಿ ಹಾಯ್ದ ದಾರಿಯಲೇ ಬೆಂದು ಹೋದ;
ಉರುಳಿದ ಘಳಿಗೆ ಗಳು ಗಂಟೆ ಗಳಾಗಿ
ದಿನ, ವಾರ, ಮಾಸಗಳಾದವು: ಬೆದರಿಕೆ ಕಾತುರವಾಯಿತು
ಕೌತುಕ ಹವ್ಯಾಸ ವಾಯಿತು - ಇದ್ದಲ್ಲಿ ಇಲ್ಲದ ನು ಕಾಣುವುದು.
ಬದುಕಿಗೆ ಮಿಥ್ಯ ತುಂಬುವ ಬುಡಬುಡುಕಿಯ ಬಡಬಡಿಕೆ.

POET'S NOTES ABOUT THE POEM
Kannada poem about fortune teller
COMMENTS OF THE POEM
READ THIS POEM IN OTHER LANGUAGES
Close
Error Success