ಆಗಾಗ ಬಣ್ಣ ಬದಲಾಯಿಸಿ ಚಾಚಿದ ಎಲೆಗೆ ಹಾರಿ
ನಾಲಗೆಯ ಚಾಚಿ ಸೋತು ದಣಿದ ಗೋಸುಂಬೆ ರಾಯ, ಮೇಲೆ ಪ ವಡಿ ಸಿತ್ತು ತಪ್ಪಿ ಬೇಟೆ ಹಲವು ಬಾರಿ;
ಮೂರು ಸಲ ನಾಲಗೆಗೆ ಸೋಂಕಬೇಕಿದ್ದ ಕೀಟ ಮಾಯ!
ಮಂಡೂಕ ಒಂದು ಕಂಡಿತ್ತು ಸುತ್ತ ಕಣ್ಣುಗಳ ತಿರುಗಿಸಲು
ಅದೆಲ್ಲಿಂದಲೋ ಕುಪ್ಪಳಿಸಿ ಕಿರಿಕಿರಿಸಿ ಹಾರಿ ಬಂದು
ಸಿಕ್ಕ, ತಪ್ಪಿಸಿ ಕೊಂಡ ಕೀಟ ಗಳನ್ನೆಲ್ಲ ಸೆಳೆದು ತಿಂದು
ಕೇಕೆ ಹಾಕಿ ಕ್ರೋ ಕಿ ಸುತ್ತ ಗಂಟಲು ಕುಣಿಸಿ ಕೊಂಡು
ಮಾಯವಾದ ಭಕ್ಷ್ಯ ಗಳ ಮೆಲಕು ಹಾಕುತ್ತಲೇ ಯೋಧ,
ಎಲ್ಲಿಂದಲೋ ಹಾರಿಬಂದು ಒಂದು ಹೂವನ್ನೂ ಹೀರದೆ
ಸುತ್ತಿ, ಮುತ್ತುವ ಚಿಟ್ಟೆ ಯನು ಕಂಡು ಪಟ್ಟಿತು ಕ್ರೋಧ
ವಯ್ಯಾರ ದಿಂದ ಹಾರುತ್ತಿತ್ತು ಅದು ಎಲ್ಲಿಯೂ ಕೂರದೆ
ಛಲದಿಂದ ಮಂಡೂಕ ಅದರತ್ತ ಗುರಿ ಇಟ್ಟು ಹಾರಿತ್ತು
ನಾಲಿಗೆಯ ಚಾಚಿ; ತಪ್ಪಿ ಹೋಗಿತ್ತು ಚಿಟ್ಟೆ ಹಾರಿಹೋಗಿ
ತಳದ ಬಂಡೆ ಗಳ ಸಂದಿಯಿಂದ ಸರ್ಪ ಒಂದು ಚಿಮ್ಮಿತ್ತು
ತಪ್ಪದೇ ತನ್ನ ಬೇಟೆಯಾಡಿ ಜಾರಿತ್ತು ಆ ಭಾರಿ ಭೋಗಿ
ಮರೆಯಾಗಿ ನೋಡುತ್ತಿದ್ದ ಓತಿ ತನ್ನಲ್ಲಿ ಗೊಣಗಿತು ಇತಿ
' ಮಿತಿ ಇಲ್ಲದ ಹಾರಾಟಕ್ಕೆ ಈ ಕೊನೆಯೇ ದಿಟ ಈ ಗತಿ: '
This poem has not been translated into any other language yet.
I would like to translate this poem