ತೋಟ, ನದಿಯ ದಡಗಳಲಿ ಅಳುಕಿದಂತೆ ಪವಡಿಸಿ,
ತುಸು ದೂರ ಸರಿದು ಏನನ್ನೋ ತಿರುಚಿ ಬೆರಳಾಡಿಸಿ
ನಾಚಿಕೆಯ ನಟನೆಯ ಹಾವಭಾವ ಸೂಸುವ ಜೋಡಿ--
ಆಗಾಗ ಮುಖ ಮರಿದು, ವ್ಯಂಗ್ಯ ತೋರಿ ಲ್ಲವೇ ನೋಡಿ,
ಪ್ರಾಯ, ದಂತ, ಹುಮ್ಮಸ್ಸು ಕಳೆದುಕೊಂಡ ಹಿರಿಯರು?
ಏನನ್ನೋ ಮಾಡಿ, ಮಾಡದೇ ಸುಮ್ಮನೇ ತಲೆಯಲ್ಲಾಡಿಸಿ
ಅನವರತ ಬುದ್ದಿವಾದ ಬೈಗುಳ ಗಳ ಚಿತೆಯಲ್ಲಿ ಬಾಡಿಸಿ
ತೆಗೆದರೆ, ಕೇಳುವುದೇ ಚಿಗುರಿದ, ಹದಿಹರೆಯದ ಆ ವಯಸು;
ರೆಕ್ಕೆಗಳಿಲ್ಲದೆ ಸದಾ ಹಾರಲು ಅನುವಾಗಿಹ ಸಿಹಿಯ ಮನಸು?
ಅನುಭವಿತ ರಮ್ಯತೆಯು ಕಹಿಯಾಗುವುದೇ ಕಾಲ ಗತಿಯಲ್ಲಿ!
ಕಳೆದ ದಿನಗಳ, ಅಳೆದ ಸಾಹಸಗಳ ಮರೆವು ಹೊಮ್ಮವುದೇ
ಇಲ್ಲ, ಟೀಕೆಯ, ನಿಸ್ಸಾಧನೆಗಳ ಖೇದ-ಉನ್ಮಾದ ಚಿಮ್ಮುವುದೇ;
ಅದೆಲ್ಲಿ ಗತಿಸಿತು ಆ ನೀಳಬಾಳಿನ ಪ್ರಕ್ರತ ಅನುಭವದ ಸಾರ
ಯುಗಗಳು ಕಳೆದರೂ ಭಿನ್ನ ವಲ್ಲ ಮಾನವನ ವಿಧ-ಪ್ರಾಕಾರ!
ಮಾಯ ವಾಗಿರುವುದೇ ಅನುಕಂಪ- ಅನುಭೂತಿಗಳ ಆಗರ?
This poem has not been translated into any other language yet.
I would like to translate this poem