ಆಲೋಚನೆ...! Poem by Vidya Pandarinath

ಆಲೋಚನೆ...!

ಆಸೆಗಳ ದೋಣಿಯಲ್ಲಿ ಅಲೆಗಳ ರಭಸ
ಕಾಣದ ದ್ವೀಪ, ತೇಲುವ ಬಿಳಿ ಮೋಡಗಳು..ವಿಚಿತ್ರ ವಿನ್ಯಾಸ
ಭೌತವಾದದ ವಿಷಯಗಳು ...ಎಲ್ಲವೂ... ಅಭಾಸ
ಈ ಕ್ಷಣವೇ ಸರ್ವವೂ ಹೇಳುವಂತೆದೆ ಮನದ ವಿಶ್ವಾಸ

ನಿನ್ನ ಹೃದಯದಲ್ಲಿ ನನ್ನ ಹಾಡು
ಪದಗಳ ತಾತ್ಪರ್ಯ..ಕಲ್ಪನೆಯ ಸಾಲು...ನಿನದೆ ಪಾಡು
ಆಲೋಚನೆ ಚರಣ..ಮನ ದಳ ಡಾ ಏರ್ಪಾಡು
ಭಾವನೆಗಳು ಸ್ವರ.... ಉಚ್ಚಸ್ವರ ಹೊಂದಾಣಿಕೆ ಮಾಡು
ಜೀವನ ಮನೋಭಾವ.....ಕೊನೆಯವರೆಗೂ ಕಾಪಾಡು

ನಂಬಿಕೆಯ ಒಡವೆ ಮೌಲ್ಯಗಳನ್ನು...ಆರಾಧಿಸು
ಜೀವನದ ಅಮೊಲ್ಯಯವಾದ ಕ್ಷಣಗಳು ಅನುಭವಿಸು
ಯಾವುದೂ ಶಾಶ್ವತವಲ್ಲ...ಅತಿಯಾದ ಚಿಂತನೆ ನಿಲ್ಲಿಸು
ಕ್ಷಣ...ಕ್ಷಣ..ಕ್ಷಣ..ಶ್ರೇಷ್ಠ ಪ್ರಕೃತಿ ಕೊಡುಗೆಗಳನ್ನು ಅನುಗ್ರಹಿಸು.

COMMENTS OF THE POEM
READ THIS POEM IN OTHER LANGUAGES
Close
Error Success