ಚಿಲಿಪಿಲಿ ನಿನಾದದ ಸಂಗೀತ ಮೊಳಗಿಸುವ ಮುಂಜಾವಿನ
ರಾಗದಲಿ ದನಿಗೂಡಿಸಿ ಸಂಗೀತದ ಸವಿಜೇನ ಸವಿಯಲೇ,
ಇಲ್ಲ, ಹಳಸಿದ ಯೇೂಚನೆಗಳ ಕಿರಿಕಿರಯ ಅಡ್ಡ -ಹರಿವಿನ,
ಚುಚ್ಚಿ ಬೆಚ್ಚಿಬೀಳಿಸುವ ತಾರತಮ್ಯ ಗಳ ನಡುವೆ ಸರಿಯಲೇ?
ಸಂಚು-ಕಾಂಚಾಣಗಳ, ಏರು ಪೇರುಗಳ ಮಣಭಾರದ ಕಂತು
ಸುದ್ದಿ ಸಗಟುಗಳನು ತೂಗಿ ಭಾಗಿಸಿ, ಮೆಚ್ಚಿ ತಲೆ ತೂಗಲೇ
ಹುಸಿ ಮೆರಗಿನಲಿ.. ಈ ಪರಿಯಾಗಿ, ಪರಿಪರಿಯಾಗಿ.. ಇಂತು?
ಯಾರೂ ಕಾಣದ ಎಲ್ಲಿಯೂ ಇಲ್ಲದ ಕಲ್ಪನೆಯ ಸವಿ ಸಂತಸ
ಸಿಗುವುದೇ ಹೋನ್ನು- ಹಣದ ಸುರಿಮಳೆಯ ಈ ಕ್ಷೇತ್ರದಲ್ಲಿ?
ಭಾರೀ ಚೀಲಗಳ ತುಂಬಿ, ತುಂಬುತ ಆದರೂ ಅತಿ ಆಯಾಸ,
ಡಬ ಡಬಿಸುತಿರುವ ಆ ಎರವಲು ಹ್ರುದಯ ಕೊಟ್ಟ ಪಾತ್ರದಲ್ಲಿ
ಬಟ್ಟಬಯಲಿನ, ರಣ ಬಿಸಿನಲಿ, ನಡಿಗೆಯಲಿ ಹಾಗೂ ಹೀಗೂಹೇಗೋಹುಸಿಸಂತಸವ
ಹೊತ್ತುಸುಮ್ಮುನೇಮುುಂದೆಸಾಗಲೇ
ಇಲ್ಲ, ಘಳಿಗೆಯ ನಿಜ ಅರಿವಿನ ಸಂಪತ್ತು ಎಂದು ಸಾರಲೇ..?
This poem has not been translated into any other language yet.
I would like to translate this poem