ನೊಣ Poem by Vidya Pandarinath

ನೊಣ

ಹತ್ತಾರು ನಿಮಿಷ ಸುತ್ತಾ ಹಾರಿ, ರೇಗಿಸಿದ ನೊಣ ಒಂದು
ಕೊನೆಗೆ ಭರದಿಂದ ಅದೆಲ್ಲಿಂದಲೋ ಹಾರಿಬಂದು
ಕುಡಿಯಲು ಎತ್ತಿಕೊಂಡ ಲೋಟಕ್ಕೆ ಬಿತ್ತು....
ತೇಲದೇ, ಮುಳುಗದೆ ಸಾವಿನ ಪೇಚಿನಲ್ಲಿತ್ತು;
ಮೋಜು- ಪ್ರತಿಕಾರಕ್ಕೆ ಸಿಕ್ಕಿತ್ತು ಆನಂದದ ಮಾಗ೯-
ನೋಡ ನೋಡುತ್ತಲೇ ಮುಳುಗಿತು ಪ್ರಾಣಿಗಳ ಭೇದವಗ೯
ಮನದ ಮೂಲೆಯಿಂದಲೊಂದು ದನಿ ನುಡಿದಿತ್ತು:
'ಉಳಿಸು -- ತೊಳಲಾಡುವ ಆ ಅಲ್ಪ ಜೀವಿಯ ನೆತ್ತು! '
ಬದಿಯ ಚಮಚ ಸಾಕಾಯಿತು ಕ್ಷಣದಲ್ಲಿ
ಎತ್ತಲು ;
ಚಡಪಡಿಸಿ, ರೆಕ್ಕೆ ಕೊಡವಿ ಮಾಯವಾಯಿತು ಬಡಪಾಯಿ
ಮಗದೊಮ್ಮ ಮರಳಿ ಬಂದು ಮೆದುವಾಗಿ ಭುಜವನೇರಿತು , ಮುಖವನೊರೆಸಿ ಕರಗಳನು ಜೋಡಿಸಿ ನುಡಿಯಿತು ಈಪರಿ : 'ನಮನಗಳು, ಓ ತಾಳ್ಮೆ ಔದಾರ್ಯ ದ ಅಮಿತ ಸಿರಿ! '

POET'S NOTES ABOUT THE POEM
Kannada poem about housefly.. its a Metaphysical poem
COMMENTS OF THE POEM
READ THIS POEM IN OTHER LANGUAGES
Close
Error Success