ಬೆಳ್ಳಿ ಮೂಡಿ ಹೊಂಗಿರಣ ಹೊಮ್ಮಿ
ಹರಿದು ಹಚ್ಚ ಹಸಿರಿನ ಬೊಗಸೆ ತುಂಬಿದ
ಗುಚ್ಛ ಬಣ್ಣ ಗಳ ಇಂಪನು ಸವಿದು
ತಂಗಾಳಿ ಯೊಡಗೂಡಿ ಚಿಲಿಪಿಲಿ
ಕುಶತೋಪರಿಯ
ನಿನಾದ, ಮಧುಕರನ ಝೇಂಕಾರದ
ಸುನಾದ ಸವಿಯುತ ನೆಮ್ಮದಿ ಯ ಕಾಣಲೇ....!
ತೇಲಿ ಹಾರುವ ಗಿಡುಗ ಹದ್ದಿನ
ಬೆಚ್ಚಿ ಬೀಳಿಸುವ ಭರದ ಎರಗಾಟ
ನೋಡಿ ಅಳುಕಿ ಬೇಸರ ಪಡಲೇ....!
ಕೊಕ್ಕಿ, ಕಿವುಚಿ, ಹರಡಿ ತುಳಿದು
ತಿನ್ನುವ ಹದ್ದಿನ ಹದ್ದು ಮೀರಿದ
ಭಕ್ಷ ನೋಡಿ ಬಳಲಿ ಮುಖ ತಿರುವಲೇ....!
ನಿಶಾ- ಸುಪ್ತ ಸದ್ದುಗದ್ದಲ ಚಿಗುರಿ ಚೀರಿ
ದಿನದ ಉಪಟಳಗಳ ಸರಣಿ ಯಲಿ ಮೂಕ ವೇದನೆ ಯಾಗುವುದನು ಅರುಹಿ,
ಕುಗ್ಗಿ, ಮೊಟಕಾಗಿ, ಅಳುಕಿ ಮರುಗಲೇ....!
ದೂರದಾರಿಯ ಉದ್ದ ಜಡನಡಿಗೆಯಲಿ
ಕ್ರಮಿ ಸುತ - ಎಲ್ಲೋ ಮೂಡಿ ಕಂಪಿಸುತ,
ನಾಸಿಕ, ಜಿಹ್ವ ಗಳನು ಕೆಣಕಿ ಕರೆಯುವ,
ಸ್ವಾದಮೂಡಿಸಿ, ಸೋಲಿಸಿ ಸೆಳೆಯುವ -
ಅಲ್ಪ ಸ್ವಲ್ಪ ಸಂತಸದ ಕಟ್ಟುಗಳನು
ತ್ಯಜಿಸಿ ಆತ್ಮದಶಿ೯ಯ ಸಂತೃಪ್ತಿ
ನೀಡುವ ಅಗೋಚರ ಗುರುತ್ವ ವನು
ಎಡಬಿಡದೇ ಹಿಂಬಾಲಿಸಿ ಗುರಿ ತಲುಪಲೇ........?
This poem has not been translated into any other language yet.
I would like to translate this poem