ತರಗೆಲೆಗಳ ಸುತ್ತ ತಿರುಗಿ ನುಸುಳಿ, ಮೆದು ಕಚಗುಳಿಗಳ ನೀಡುತ್ತಲೇ
ಮಂದಹಾಸ ದೀ ಬೀಸುತಿದೆ ತಿಳಿಗಾಳಿ,
ಮಂಪು ಬರಿಸುವ ಅದೇ ತೆರದಿ;
ವಿಣುಕಿ ಮಾಯವಾಗುವ ಹೊನ್ನ ಕಿರಣಗಳ
ಅಲ್ಲಿ -ಇಲ್ಲಿ, ಎಲ್ಲೆಂದರಲ್ಲಿಯ, ಚರಣಗಳ
ಬಳಿಯ ಕಣ್ಣುಮುಚ್ಚಾಲೆ ಯ ಆಟ;
ಆಹಾ! ಸೊಬಗಿನ ತುಂತುರಗಳ ಮಾಟ!
ಎಲ್ಲಿಯೋ ಹುದುಗಿ ಅವಿತು ಕುಳಿತ
ಮನದಾಳದಲ್ಲಿನ ಎಳೆಗಳಲಿ ಸೆಳೆತ;
ಸೂಪ್ತ ಸಂತಸ ವನು ಹೊರ ಹೊಮ್ಮಿ,
ಚೈತನ್ಯ ದಾ ಅನಂತ ಕುಡಿಯಾಗಿ ಚಿಮ್ಮಿ
ಮೂಡಿ ಬರುತಿದೆ, ಬಹುರೂಪಿ ಯಾಗಿ
ಅಮಿತ ಆನಂದದ, ಸ್ಫೂರ್ತಿಯ ಝರಿಯಾಗಿ
ಮಾಯಾ ಮೇಘಗಳು ಹುಬ್ಬುಗಂಟನಿಕ್ಕುವ, ಚದುರುವ ಓಟ; ಒಟ್ಟಾಗಿ ಧುಮುಕುವ,
ಹಸಿರಿನ ಉಸಿರಾಟದ; ಕೇಸರು, ಕಲ್ಲು ಬಂಡೆ ಗಳ
ಲೆಕ್ಕಿಸದೆ ಧುಮುಕುತ ಧವಳ ಹರಳು ಗಳ
ಚಿಮ್ಮುತ್ತ ಹಾಡಿ ನತಿ೯ಸುವ ಲಹರಿಯ,
ಉನ್ಮಾದ, ಸೌಂದಯ೯ದ ಆ ಪರಿಯ
ಕಾಣದೇ ವಿಕಸಿತ, ವಿಸ್ಮಿತ ಈ ಲೋಕ?
ತಾಪ, ಪಾಪ, ಶಾಪ ಗಳ ಮುಕ್ತಿ ಯ ನಾಕ ತರಲೆಂದೇ ಜಪ, ತಪ ದಂಡಗಳ ಸಲ್ಲಿಸಿರುವವರಿಲ್ಲವೇ?
ಎಲ್ಲೇ ದಾಟಿದ ಲೋಪ ಗಳ ಸಹನೆ ಮೀರಿ,
ಮುಸುಕಿದ ಘನ ಕಾಮೋ೯ಡಗಳನು ಚೀರಿ ಝಾಡಿಸಿ, ಪೀಡಿಸಿ, ಎತ್ತಿ ಮುಳುಗಿಸುವ, ಇಳೆಯ
ಕೊಚ್ಚಿ ಕೋಂಡೋಯ್ಯುವ, ಚದುರಿಸುವ ಪ್ರಳಯ
ಕಂಡು ಬೆಚ್ಚಿ, ಬಿಳಿಚಿ, ಸ್ತಬ್ಧ ವಾಗಿರುವವರಿಲ್ಲವೇ?
This poem has not been translated into any other language yet.
I would like to translate this poem