ಹುಸಿ ಸಂತಸ..! Poem by Vidya Pandarinath

ಹುಸಿ ಸಂತಸ..!

ಚಿಲಿಪಿಲಿ ನಿನಾದದ ಸಂಗೀತ ಮೊಳಗಿಸುವ ಮುಂಜಾವಿನ
ರಾಗದಲಿ ದನಿಗೂಡಿಸಿ ಸಂಗೀತದ ಸವಿಜೇನ ಸವಿಯಲೇ,
ಇಲ್ಲ, ಹಳಸಿದ ಯೇೂಚನೆಗಳ ಕಿರಿಕಿರಯ ಅಡ್ಡ -ಹರಿವಿನ,
ಚುಚ್ಚಿ ಬೆಚ್ಚಿಬೀಳಿಸುವ ತಾರತಮ್ಯ ಗಳ ನಡುವೆ ಸರಿಯಲೇ?
ಸಂಚು-ಕಾಂಚಾಣಗಳ, ಏರು ಪೇರುಗಳ ಮಣಭಾರದ ಕಂತು
ಸುದ್ದಿ ಸಗಟುಗಳನು ತೂಗಿ ಭಾಗಿಸಿ, ಮೆಚ್ಚಿ ತಲೆ ತೂಗಲೇ
ಹುಸಿ ಮೆರಗಿನಲಿ.. ಈ ಪರಿಯಾಗಿ, ಪರಿಪರಿಯಾಗಿ.. ಇಂತು?
ಯಾರೂ ಕಾಣದ ಎಲ್ಲಿಯೂ ಇಲ್ಲದ ಕಲ್ಪನೆಯ ಸವಿ ಸಂತಸ
ಸಿಗುವುದೇ ಹೋನ್ನು- ಹಣದ ಭಾರೀ ಸುರಿಮಳೆಯ, ಕ್ಷೇತ್ರದಲ್ಲಿ?
ಭಾರೀ ಚೀಲಗಳ ತುಂಬಿ, ತುಂಬುತ ಆದರೂ ಅತಿ ಆಯಾಸ,
ಡಬ ಡಬಿಸುತಿರುವ ಆ ಎರವಲು ಹೃದಯ ಕೊಟ್ಟ ಪಾತ್ರದಲ್ಲಿ
ಬಟ್ಟಬಯಲಿನ, ರಣ ಬಿಸಿನಲಿ, ನಡಿಗೆಯಲಿ ಹಾಗೂ ಹೀಗೂ
ಹೇಗೋ ಹುಸಿ ಸಂತಸವ ಹೊತ್ತುಸುಮ್ಮುನೇಮುುಂದೆಸಾಗಲೇ
ಇಲ್ಲ, ಘಳಿಗೆಯ ನಿಜ ಅರಿವಿನ ಸಂಪತ್ತೆಂದು ತಿಳಿದು ಬಾಗಲೇ?

Saturday, February 28, 2026
Topic(s) of this poem: happiness
POET'S NOTES ABOUT THE POEM
Kannada poem about a expression of the contrast between the real joy in nature and the false happiness in the materialistic world
COMMENTS OF THE POEM
READ THIS POEM IN OTHER LANGUAGES
Close
Error Success