ಋತು ರೇಖಾಚಿತ್ರ..! Poem by Vidya Pandarinath

ಋತು ರೇಖಾಚಿತ್ರ..!

ಕಣ್ಣರಳಿಸಿ ಮುಗುಳು ನಗೆಯ ಚೆಲ್ಲಿ ಮುಗ್ಧ
ಕೈ ಕಾಲು ಗಳನು ಆಡಿ ಸುವ ಮುದ್ದು
ಶಿಶು ಗಳಂತೆ ಆನಂದ ಸೂಸುವ ವಸಂತಾ
ಜೀವ ಕಳೆಯನೇ ಚಿಮ್ಮಿ ಸಿಹಳು ಧರೆಯಲ್ಲಿ
ಹೊಸ ಆಸೆ, ನವಚೇತನದ ಆವರಣ ವಾಗಿ.

ನೋಡ ನೋಡುತ ಕಾವೇರಿ ಧಗೆಯು
ಆವರಿಸಿ ತಂಪು ಇಂಪುಗಳ ಛಾಯೆಯನೆಲೆ
ಅರಸುವಂತೆ ಮೂಡಿಹಳು ಬೇಗುದಿಯ ಗ್ರೀಷ್ಮಾ,
ಸಾಲದೆಂಬಂತೆ ಧೂಳು, ಬೆವರಿನ ಕಿರಿಕಿರಿ ಯ ಬಳಿದಿಹಳು;
ಬದಲು ದಿಟ; ಆದರೆ ಗೊಂದಲ ಸರಿಯೇ...?

ಹಿಡಿ -ಹಿಡಿ ಎಂದು ದಿಕ್ಕು - ದೆಸೆ ನೋಡದೇ
ಚೀರಿ, ಹೀರಿ ತೊಯ್ದು ತೊಳೆದು ಎಡಬಿಡದೇ
ಅಂಕು ಡೊಂಕಿನ ಹಳ್ಳದಿಣ್ಣೆಗಳಲಿ ಹರಿದಾಡಿ
ಹಚ್ಚ ಹಸಿರಿನ ಉಡುಗೆಯ ಚೆಲುವನು
ತುಂಬಿಸಿ ವಿಚಿತ್ರ ಮುದ್ರೆ ಯ ನಮೂದಿಸಿಹಳು ವಷಾ೯.

ಕಟ್ಟಿನ ಮಾಸಲು ಚಿತ್ತಾರ ದಲಿ ಇಳಿಸಿ ತೃಪ್ತಿ ಪಡುವ
ಕುಂಚ ಕಾರ ನಂತೆ ಕಡಿದು ಕೆತ್ತಿಹ ಕರಡು ಶಿಲೆ,
ಕುಯಿಲು ಮುಗಿಸಿದ ಬರಡು ಹೊಲಗಳ ಉದ್ದಕ್ಕ
ಅಲ್ಲಿ ಇಲ್ಲಿ ಎಲ್ಲೆಡೆ ಬಾಯ್ತೆರೆದು ಮಲಗಿಹ
ಶವದಂತೆ ಸ್ತಬ್ಧ ನಿದ್ದೆ ಯಲ್ಲಿ ಸ್ಥಿರವಾಗಿಹಳು -- ಶಿಶಿರ...!

ಋತು  ರೇಖಾಚಿತ್ರ..!
Tuesday, December 13, 2022
Topic(s) of this poem: seasons
POET'S NOTES ABOUT THE POEM
Kannada poem about Seasons
COMMENTS OF THE POEM
READ THIS POEM IN OTHER LANGUAGES
Close
Error Success