ಮಹಾನ್ ದೇಶ Poem by Praveen Kumar in Bhavana

ಮಹಾನ್ ದೇಶ

ನಿನ್ನ ನನ್ನದುವಲ್ಲವೀ ಮಹಾನ್ ದೇಶ,
ಪೂರ್ವಜರ ಪುಣ್ಯವಿಶೇಷದ ಫಲವೋ ತಿಳಿಯೋ, ಗೆಳೆಯ;
ಇಂದು ನಿನ್ನೆಯದಲ್ಲವೋ ಈ ಭಾರತ ದೇಶ,
ಯುಗಾಂತರದ ಬದುಕು, ಬೆಳಕೋ ತಿಳಿಯೋ, ಗೆಳೆಯ;
ಮಾನವ ಸಂಸ್ಕøತಿ ಬೀಜ ಬಿತ್ತಿ ಮೊಳೆತುದು ಇಲ್ಲಿ,
ಮಾನವ ಚರಿತ್ರೆಯ ದಾರಿ ಸುತ್ತಿ ಬಳಸಿದುದು ಇಲ್ಲಿ,
ಬದುಕು ವಿಕಾಸದ ನಕ್ಷೆ ರೂಪ ತಾಳಿದುದು ಇಲ್ಲಿ,
ವೇದವಾದದ ನಾದ ಮೂಡಿಕೂಡಿದುದು ಇಲ್ಲಿ;
ಜ್ಞಾನ ಬೆಳಕಿನ ಕಿರಣ, ರಕ್ತ ತರ್ಪಣ ಭರಣ
ತೊಡಿಸಿತಿಲ್ಲಿ ಸಂಸ್ಕಾರ ಲಾವಣ್ಯದಾಭರಣ;
ನಿನ್ನ ನನ್ನದುವಲ್ಲವೀ ಮಹಾನ್ ದೇಶ,
ಪೂರ್ವಜರ ಪುಣ್ಯವಿಶೇಷದ ಫಲವೋ ತಿಳಿಯೋ, ಗೆಳೆಯ;
ಇಂದು ನಿನ್ನೆಯದಲ್ಲವೋ ಈ ಭಾರತ ದೇಶ,
ಯುಂಗಾಂತರದ ಬದುಕು, ಬೆಳಕೋ ತಿಳಿಯೋ, ಗೆಳೆಯ.

Saturday, April 30, 2016
Topic(s) of this poem: nation
COMMENTS OF THE POEM
READ THIS POEM IN OTHER LANGUAGES
Close
Error Success