ಮಹಾ ಸಿದ್ಧ Poem by Praveen Kumar in Bhavana

ಮಹಾ ಸಿದ್ಧ

ಬುದ್ಧ, ಮಹಾಸಿದ್ಧ,
ಹೀಗೋ ಸಂಸಾರ ಕೂಪಕ್ಕೆ ಬಿದ್ದಿದ್ದ;
ಬಿದ್ದಲ್ಲಿಂದ ಮೇಲೆದ್ದ,
ವಾಸನೆಗಳ ಗೆದ್ದ,
ಎಲ್ಲಾ ಬಿಟ್ಟು, ಭಿಕ್ಷಾಟನೆ ದಾರಿ ಹಿಡಿದ;
ಆತ್ಮವನುಜ್ಜುಜ್ಜಿ,
ಅಂಟಿದ್ದ ಕೊಳೆಗಳ ತೆಗೆದ;
ಬುದ್ಧಿಗೆ ಒರೆ ಹಿಡಿದಾಗ ಜೀವ,
ಬುದ್ಧ ಬೆಳಕಾಗಿ ಬಂದ;
ಹೊಸದಾರಿ ಕೊಟ್ಟ, ಹೊಸ ದೃಷ್ಠಿ ಕೊಟ್ಟ,
ತುಂಬಿದ್ದ ಕತ್ತಲೆಗೆ ಹೊಸ ಅರ್ಥ ಕೊಟ್ಟ.

ಎಲ್ಲವೂ ಭ್ರಮೆಯೆಂದು,
ಭ್ರಮೆಯೆ ಸಕಲ ಕಾರಣವೆಂದು,
ಭ್ರಮೆ ನಿವಾರಣೆಗೆ ಶಪಥ ತೊಟ್ಟ;
ಊರೂರು ತಿರುಗಿ,
ಜನ ಸಂಕಷ್ಟಕ್ಕೆ ಮರುಗಿ,
ತನ್ನೊಳಗಿನ ಬೆಳಕನ್ನು ಹಂಚಿ ಕೊಟ್ಟ;
ಶಾಶ್ವತವೆಂಬುವುದಿಲ್ಲ,
ಕಾಲಮುದ್ರೆಗಳ ಸಂಕೋಲೆಯೆಲ್ಲ,
ಕಾರ್ಯಕಾರಣ ಕೊಂಡಿಯೆ ಸೂತ್ರವೆಂದು,
ವಿಶ್ವಸತ್ಯದ ಗುಟ್ಟನ್ನು ತೆರೆದಿಟ್ಟು ಕೊಟ್ಟ.

ಪ್ರಪಂಚಕ್ಕೆ ಬೆಳಕನ್ನು ಕೊಡಲು,
ಚಿಂತನೆಯ ತಪಸ್ಸಿಂದ,
ತನ್ನನ್ನು ತಾನೇ ಸುಟ್ಟುಕೊಂಡ;
ಸೂರ್ಯ ಚಂದ್ರರಿಗಿಂತ ಶುಭ್ರ,
ನಿಹಾರಿಕೆಗಳಂತೆ ನಿರಭ್ರ,
ಬೆಳಕಾಗಿ ಒಳಗಿಂದ ಹುಟ್ಟಿಕೊಂಡ;
ಒಳಗೊಳಗೇ ಉರಿದು,
ಹೊಸ ಆಧ್ಯಾತ್ಮ ದೀಪಕ್ಕೆ,
ಇಂಧನವಾಗಿ ನಿಂತ;
ತನ್ನನ್ನು ಆಹುತಿುಟ್ಟು, ನಿರ್ವಾಣ ಕಂಡ.

ಅಷ್ಟಪಂಕ್ತಿ ಪಥ ತೋರಿ,
ತಥಾಗಥ, ಅರ್ಹತ್ತಾ,
ಹುಟ್ಟುಸಾವಿನ ಚಕ್ರ ಭೇದ್ಯವೆಂದ;

ನಿರ್ವಾಣವೆ ಕರ್ಮ ಮುಕ್ತಿ,
ನಿರ್ವಾಣದಿ ಅಲೌಕಿಕ ಶಾಂತಿ,
ವೈರಾಗ್ಯದಿ ಸಕಲ ಸುಖ ಸಿದ್ಧಿಯೆಂದ;
ಸಂಷವನು ಕಟ್ಟಿ,
ನಿರ್ಭಾವವನು ಮುಂದಿಟ್ಟು,
ಸಾಖ್ಯಮುನಿ ಬುದ್ಧ, ಮಹಾಸಿದ್ಧನಾದ.

Friday, April 29, 2016
Topic(s) of this poem: buddha
COMMENTS OF THE POEM
READ THIS POEM IN OTHER LANGUAGES
Close
Error Success