ಪೂಜ್ಯರಲಿ ಪೂಜ್ಯ ರಾಘವೇಂದ್ರ ಗುರುರಾಜ,
ದಯೆಧರ್ಮದಧೀಕ್ಷ, ವಿಶ್ವದರ್ಶನ ತೇಜ,
ನಿನ್ನ ಪಾದದ ಬಳಿಗೆ ಬಯಸಿ ಬಂದಿಹ ನಮಗೆ
ಆಶ್ರಯವ ಕೊಡುಸ್ವಾಮಿ, ಕೈಹಿಡಿದು ನಡೆಸು.
ನಿನ್ನ ದರ್ಶನಕ್ಕೆಂದು, ಕಣ್ಣು ಕಾತುರಗೊಂಡು
ದಿಕ್ಕೆಟ್ಟು ಕತ್ತಲಲಿ ತತ್ತರಿಸಿದೆ, ತಂದೆ;
ಪುಣ್ಯ ಬೆಳಕಾಗಿ, ಮೈಮನಕೆ, ದಾರಿದೀಪ ನೀನಾಗಿ
ಹೃದಯ ತುಂಬಿ ಬಾ, ಗುರುವೆ, ಮನಸ ತುಂಬಿ ಬಾ.
ದೀನ ಭಕ್ತರ ಕರೆಗೆ ಮನವೀಣೆ ಶ್ರುತಿುಟ್ಟು,
ಹೃದಯ ಸ್ಪಂದಿಸಿ ಭೀಕ್ಷೆ ಕೊಡುವ ಕರುಣ ಮೂರ್ತಿ,
ನಿನ್ನ ಪಾದದ ಬಳಿಗೆ ಬಯಸಿ ಬಂದಿಹ ನಮಗೆ
ಆಶ್ರಯವ ಕೊಡುಸ್ವಾಮಿ, ಕೈಹಿಡಿದು ನಡೆಸು.
ಬೆಂಬೆತ್ತಿದ ಸಂಕಟ ತೊಲಗಲು ಜನರು
ಮುಂತೋಚದೆ ಓಡಿ ನಿನ್ನಲ್ಲಿಗೆ ಬರಲು,
ಪ್ರೇಮ ಸಂತಾಪದ ಹೃದಯದಿ ಹರಸುವ,
ದಾರಿಯ ತೋರುವ ದಯಾಮು ನೀನು.
ಕೊನೆಗತಿಯೆಂದು ಸೇವೆಯಗೈಯ್ಯುವ,
ಕಾಪಾಡೆಂದು ಕರೆಯುವ ದೀನರ,
ಕೈಬಿಡಬೇಡವೆಯೆನ್ನುವ ಜನರ
ಮನದಲಿ ತುಳುಕುವ ಭಕ್ತಿಯ ಸಾರ.
ನಿನ್ನನು ಹೊರತು ಗತಿಯೆನಗಿಲ್ಲ,
ಸಂಕಟದಿಂದ ಪೊರೆವವರಿಲ್ಲ;
ದಯೆಯನು ತೋರು, ಗುರುಕುಲತಿಲಕ,
ಸಮರ್ಪಣ ಭಾವದಿ ನಿನ್ನೆಡೆ ಬಂದೆ.
ನಿರ್ಬಲ ನಾನು, ನಿರ್ದು ಏಕೆ,
ಭಕ್ತರ ಹರಸುತ ಬಳಲಿದೆ ಏನು?
ಬೃಂದಾವನದ ಕರುಣೆಯ ಬೆಳಕೆ,
ನಿನ್ನ ಪಾದಕೆ ಶರಣು ಬಂದಿರುವೆ.
ಮಮತೆುಂದ ಕಂದನನ್ನು ಮುದ್ದುಮಾಡಿ ಮೊಲೆಯ ಕೊಡುವ
ತಾಯ ಮೇಲೆ ಸಿಟ್ಟಿನಿಂದ ಕಂದ ಮೊಲೆಯ ಕಚ್ಚಿದಾಗ
ನೋವಿನಿಂದ ನರಳಿ ತಾಯಿ ಮಗುವ ದೂರ ದೂಡುವಂತೆ
ಶರಣು ಬಂದ ಭಕ್ತರಿಗೆ ಮಾಡಲಾರ ರಾಘವೇಂದ್ರ;
ನೋವು ತಾಳಿ, ಮೈಯ ತಡವಿ, ತಾಳುಕಂದನೆನ್ನುವ,
ಕರುಣೆುಂದ ಮುದ್ದು ಮಾಡಿ ಸರ್ವರೀತಿ ಹರಸುವ,
ಕರ್ಮಕೂಪದಿಂದ ಎತ್ತಿ, ಪುಣ್ಯ ಭದ್ರೆಯಲಿ ತೊಳೆದು
ಸಮಯದಲ್ಲಿ ಭಕ್ತರನ್ನು ಕೈಯ ಹಿಡಿದುಕ ನಡೆಸುವ.
ಕಷ್ಟ ಕಂಡ ಸ್ವಾಮಿ ಹೃದಯ ಕರುಣೆಬುಗ್ಗಿಯಾಗಿದೆ,
ವಿಶ್ವಪ್ರೇಮದಿಂದ ಸತ್ವರಸದ ಚಿಲುಮೆಯಾಗಿದೆ,
ಭಕ್ತಿ ಪ್ರೇಮ ಹೊತ್ತು ನಿಂತ ಭಕ್ತಜನರ ಗೋಳಿಗೆ
ಕೊನೆಗೆ ತರಲು ಯೋಗನಿದ್ರೆಯಾಂತು ನಿಂತ ತಂದೆಯು
ಪ್ರೇಮ ಕರುಣೆ ಯೋಗದಿಂದ ಮೇಲೆ ಮೇಲೆ ವಿಕಾಸಹೊಂದಿ
ರಾಘವೇಂದ್ರ ಸ್ವಾಮಿ ಬೇಗ ಪೂರ್ಣರೂಪ ಪಡೆಯಲಿ.
This poem has not been translated into any other language yet.
I would like to translate this poem