ನಿಹಾರಿಕೆಗಳ ಬೆಳಗುವ ನಂದಾದೀಪ Poem by Praveen Kumar in Bhavana

ನಿಹಾರಿಕೆಗಳ ಬೆಳಗುವ ನಂದಾದೀಪ

ನೀನು ಕರೆದರೆ, ಬರುವವರು,
ನೀ ನೂಕಿದರೆ, ಕುಣಿದೋಡುವವರು,
ನೀನಾಡಿಸಿದಂತೆ, ಕ್ಷಣ ಕ್ಷಣ ಆಡುವವರು ನಾವು.
ಕಾಲಾಯ ತಸ್ಮೈ ನಮ:

ನಿನ್ನ ಲಕ್ಷ್ಮಣ ರೇಖೆ, ದಾಟದವರು,
ನಿನ್ನ ಮೀರಿ, ಮತ್ತೇನನ್ನೂ ನೋಡದವರು,
ಗೋವಿನ ನೆರಳಿನಡಿ, ಮೈಮರೆವ, ಕರುವಿನಂತೆ ನಾವು.
ನಿನ್ನ ಸೂತ್ರದ ಗೊಂಬೆಗಳಯ್ಯ.

ನೀನು ಕೊಟ್ಟಷ್ಟೆ, ಮೈ ಹೀರುವವರು,
ನೀ ಹೇಳಿದಷ್ಟನ್ನೆ, ಹೊರ ತೋರುವವರು,
ನಿನ್ನಿಷ್ಟಭಿಷ್ಟಗಳ ತೋಟದಲ್ಲರಳಿದ ಮಲ್ಲಿಗೆಗಳು, ನಾವು.
ನಿನ್ನ ಕೃಪೆಯ ಚಿಗುರುಗಳಯ್ಯ.

ನಿಹಾರಿಕೆಗಳ ಬೆಳಗುವ ನಂದಾದೀಪ,
ಆದ್ಯಂತ ಶಕ್ತಿಗಳ ಮೂಲ ಮಂತ್ರ,
ಜೀವಜೀವಗಳಕ್ಷಯ ಬೀಜ, ಕಾರಂಜಿ, ನೀನು.
ನಿನ್ನ ಸ್ಠೃಯ ನಶ್ವರ ಚುಕ್ಕೆ ನಾವು.

ವಿಶ್ವಗಡಿಯಾರದಾಧಾರ ಸ್ಪ್ರಿಂಗ್ ನೀನು,
ಆ ಗಡಿಯಾರದ ಸಂಖ್ಯ ಮುಳ್ಳುಗಳು,
ನಿನ್ನ ಲಯ, ತಾಳಕ್ಕೆ, ಸುತ್ತು ಸುತ್ತು ಸುತ್ತಿ, ಕಾಲವೆಣಿಸುವ ನಾವು.
ನಿನ್ನ ಹೊರತು ಶೂನ್ಯ ಸ್ತಬ್ಧ ಮೌನ.

ನೀನು ತೋರಿದ್ದೆ ದಾರಿ,
ನೀನು ಹೇಳಿದ್ದೆ ಧರ್ಮ,
ನಿನಗುಚಿತವೆನಿಸಿದುದೆ, ಕರ್ಮ ನಮಗೆ.
ನೀನೆಮ್ಮ, ಒಳಗು, ಹೊರಗು.

ಯಾವುದೋ ಯೋಜನೆುಂದ,
ಎಲ್ಲೆಲ್ಲೋ ಸುತ್ತಾಡಿಸುವೆ ನಮ್ಮ,
ನಿನ್ನ ವಿಶ್ವಯೋಜನೆಯ, ಅಂಕೆಸಂಖ್ಯೆಗಳು ನಾವು.
ನಿನ್ನ ಯೋಜನೆಯ ಕಾಗುಣಿತಗಳು.
ನಿನ್ನಾಟದ ವಿಕಸನ ಪ್ರಕ್ರಿಯೆ,
ಎಲ್ಲೆಲ್ಲಿ ಓಡಾಡಿಸುವುದೋ ನಮ್ಮ,
ಎಲ್ಲೆಂದರಲ್ಲಿ ಓಡಲೆಂದಿರುವವರು, ನಾವು.
ಮರು ಮಾತಿಲ್ಲದೆ ಓಡತಕ್ಕದ್ದು.

ಕಿರುಬೆರಳಿನಿಂದ, ನಮ್ಮ ನಡೆಸುವವನೆ,
ಕಲ್ಲುಮುಳ್ಳಿನ ದಾರಿ ಬಿಟ್ಟು, ನಮ್ಮ ನಡೆಸು,
ಸಂದಿಗೊಂದಿಯಲಿ, ಸುತ್ತಿ, ಸುತ್ತಿ, ಬಸವಳಿದ ನಮ್ಮ,
ಕರುಣೆುಂದ ಕೈ ಹಿಡಿದು, ಮುಂದೆ ನಡೆಸು.

Friday, April 29, 2016
Topic(s) of this poem: philosophy
COMMENTS OF THE POEM
READ THIS POEM IN OTHER LANGUAGES
Close
Error Success