ಮಂತ್ರಿ Poem by PRAVEEN KUMAR Kannada Poems

ಮಂತ್ರಿ

ಕೇಳುತ್ತಿದೆಯೆ ಭಾಜಬಜಂತ್ರಿ?
ಬರುತ್ತಿದ್ದಾನೆ ಮಹಾಮಂತ್ರಿ,
ಖಾದಿ, ಕಾಕಿ, ಕಾವಿ ಕೋವಿದರ ಹಿಂಡು
ಸುತ್ತುತ್ತಿವೆ, ಹಿಂದುಮುಂದು ಹಿಂಡು ಹಿಂಡು.

ಅಟ್ಟಮೆಟ್ಟಿ ನಡೆವ ತುಂಡು ಪಟ್ಟ ರಾಜರ ಸಾಲು,
ಬೆನ್ನು ಬಾಗಿ ಧೂಳು ತಲೆತುಂಬ ಹೊರುವ
ಸದಾ ಮದಘರ್ಜನೆಯ ವ್ಯಾಘ್ರತೇಜರ ಸಾಲು,
ಬಾಲ ಬೀಸುತ, ನಗುತ, ಕೈಮೈ ಮುಗಿವ
ಕಣ್ಣಿಗೆ ದುರ್ಲಭ ನೇತಗಳ ಹಿಂಡು
ಬೀದಿಯಲಿ ಕಣ್ತುಂಬ ಓಡುತ್ತಿಮೆಂದು.

ಮಂತ್ರಿ ಸಾನ್ನೀಧ್ಯದಲಿ ಕುಚೇಲ ಕುಬೇರನಾಗುವನು,
ಮಂತ್ರಿ ಪಾದದ ಧೂಳು ವಿಧಿಬರಹ ತಿದ್ದುವುದು;
ಇದಲ್ಲವೆ ಮಂತ್ರಿಪದ ತಂದಿರುವ ಮಹಿಮೆ,
ನವಯುಗ ಪ್ರಭುತ್ವದ ಏಕೈಕ ಹಿರಿಮೆ.

Saturday, April 30, 2016
Topic(s) of this poem: politics
COMMENTS OF THE POEM
READ THIS POEM IN OTHER LANGUAGES
Close
Error Success