ಸಾವಿರಾರು ಆಕಾಂಕ್ಷೆಗಳು Poem by Venkatesh Davangere

ಸಾವಿರಾರು ಆಕಾಂಕ್ಷೆಗಳು

ಸಾವಿರಾರು ಆಕಾಂಕ್ಷೆಗಳು, ಪ್ರತಿಯೊಂದುಸಾಯಲರ್ಹವೇ..
ಕೆಲವನ್ನು ಕಂಡಿದ್ದೇನೆ, ಮತ್ತೆ ಕೆಲವಕ್ಕೆ ಹಂಬಲಿಸುತ್ತೆನೆ...

ನನ್ನ ಕೊಂದವಳ್ಯಾಕೆ ಹೆದರಬೇಕು..? ನನ್ನ ಜೀವನದುದ್ದಕ್ಕೂ
ನನ್ನ ಕಣ್ಣಿನಿಂದ ಸುರಿಯುವ ರಕ್ತಕ್ಕೆ ಅವಳನ್ಯಾರು ಹೊಣೆಯಾಗಿಸುವುದಿಲ್ಲ.

ಬೈಬಲ್ನಲ್ಲಿ ಸ್ವರ್ಗದಿಂದ ಆಡಮ್ ನ ನಿರ್ಗಮಿಸುವೆಕೆಯ ಕಥೆಯನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ
ಅದಕ್ಕಿಂತಲೂ ಘೋರವಾಗಿ ನೀನಿರುವ ಬೀದಿಯಿಂದ ನಾನು ನಿರ್ಗಮಿಸುತಿದ್ದೇನೆ.

ಓ ಪ್ರಿಯ ಕ್ರೂರಿಯೇ, ನನ್ನ ರುಮಾಲಿನಿಂದ ನನ್ನ ಕೂದಲು ಜಡ್ಡುಗಟ್ಟಿದಾಗ
ನಿನ್ನ ನಿಜ ಬಣ್ಣ ಎಲ್ಲರಿಗೂ ತಿಳಯಬಹುದು..!

ಆದರೆ, ಯಾರಾದರೂ ಅವಳಿಗೆ ಪ್ರೇಮ ಕಾಗದ ಬರೆವುದಿದ್ದರೆ ನನಗೆ ಹೇಳಬಹುದು
ಏಕೆಂದರೆ ಪ್ರತಿದಿನವೂ ನಾನು ನನ್ನ ಮನೆಯಿಂದ ಲೇಖನಿ ಹಿಡಿದೆ ಹೊರಡುತ್ತೇನೆ.!

ಈ ವಯಸ್ಸಲ್ಲಿ ನಾನು ಮಧ್ಯ ಕುಡಿಯಲಾರಂಭಿಸಿದ್ದೇನೆ
ನನ್ನಿಡೀ ಪ್ರಪಂಚವು ಮಧ್ಯದಿಂದಲೇ ಆವರಿಸಿಕೊಂಡ ಕಾಲವು ಬಂದಿದೆ.

ನನ್ನ ಬಲಹೀನತೆಗೆ ಯಾರಿಂದ ನಾನು ಸಾಂತ್ವನ/ ನ್ಯಾಯ ಬಯಸಿದೆನೋ
ಅದೇ ಕ್ರೂರ ಖಡ್ಗದಿಂದ ನನ್ನ ಗಾಯ ಮತಷ್ಟು ಆಳವಾಗಿದೆ.

ಪ್ರೇಮದಲ್ಲಿರುವಾಗ, ಬದುಕು ಮತ್ತು ಸಾವಿಗೂ ನಡುವೆ ಸಣ್ಣದೇ ವ್ಯತ್ಯಾಸ,
ಬದುಕಬೇಕಿದೆ ನಾನು ಪ್ರೇಮವೇನೆಂದು ಗೊತ್ತಿರದ ನಾಸ್ತಿಕರಿಗೆ ಹೆದರಿ.

ನಿನ್ನ ಹೃದಯದಿಂದ ಆ ಕ್ರೂರ ಬಾಣವನ್ನು ತೆಗೆಯಲು ಸ್ವಲ್ಪವೇ ಧೈರ್ಯ ಮಾಡು,
ಅದುಹೊರಬಂದರೆ, ಹೊರಬಂದಂತೆ ನಿನ್ನ ಹೃದಯವೂ...ಜೀವನವೂ...

ದಯಮಾಡಿ ಓ ಪ್ರಿಯೆ..ಯಾವ ರಹಸ್ಯಗಳನ್ನು ಮುಚ್ಚಿಡಬೇಡ,
ಅವರು ನಿನ್ನ ನನ್ನ ಪ್ರಿಯತಮೆ ಎಂದು ತಿಳಿದಾರು....

ಉಪದೇಶಕನಿಗೂ, ಮದ್ಯದಂಗಡಿ ಬಾಗಿಲಿಗೂ ಅಂತರ ದೂರವೇ,
ಆದರೂ ನಾ ಹೊರಬರುವಾಗ ಅವನು ಒಳ ಹೋದದ್ದನ್ನು ಕಂಡೆ..

ಸಾವಿರಾರು ಆಕಾಂಕ್ಷೆಗಳು, ಪ್ರತಿಯೊಂದುಸಾಯಲರ್ಹವೇ..
ಕೆಲವನ್ನು ಕಂಡಿದ್ದೇನೆ, ಮತ್ತೆ ಕೆಲವಕ್ಕೆ ಹಂಬಲಿಸುತ್ತೆನೆ...

This is a translation of the poem A Thousand Desires by Mirza Ghalib
Wednesday, November 27, 2019
Topic(s) of this poem: love and art
COMMENTS OF THE POEM
Close
Error Success