ದೂರ ದೂರ Poem by Praveen Kumar in Divya Belaku

ದೂರ ದೂರ

ಈ ದೂರ, ಬಹು ದೂರ, ಆ ತೀರ, ಈ ತೀರ,
ಅದ ಮೀರಿ ನಡೆಯುತ್ತಿದೆ ನಿನ್ನ ನನ್ನ ಲಲ್ಲೆ;
ಕಾಣಲಾರದ ಕೇಳಲಾರದ ನಮ್ಮ ವ್ಯವಹಾರ
ಆತ್ಮ ಸಂಗಮದಿಂದ ನಡೆಯುತ್ತಿದೆ, ನಲ್ಲೆ.

ತುಟಿತುಟಿ ಎಟುಕದಿದ್ದರೇನು ಭಂಗವಿಲ್ಲ,
ತೋಳತೆಕ್ಕೆಗೆ ನಾವು ಬರದಿದ್ದರೂ ನೋವಿಲ್ಲ;
ಹೃದಯ ತುಟಿದು ಆತ್ಮ ಹಾತೊರೆಯುವ ಸುಖ
ನಿನ್ನ ನನ್ನ ಸಮಕ್ಷಮದ ಸುಖಕ್ಕೆ ಕಡಮೆಯಲ್ಲ.

ಇಲ್ಲಿ ಕನಸಲ್ಲೂ ಮನಸಲ್ಲೂ ನಾವೇ ನಾವು,
ಒಳಗೆ ಹೊರಗೆ ಎಲ್ಲೆಲ್ಲೂ ಮೇಲೆ ಕೆಳಗೆ,
ಕಣ್ಣು ಮುಚ್ಚಿದರೂ ನಾವು, ಬಿಚ್ಚಿದರೂ ನಾವು,
ಪರಸ್ಪರರ ಮಾತು ಅನುರಣಿಸುವುದು ಒಳಗೆ.

ಬರೆ ನೆನಪಲ್ಲೇ ದೇಹದ ಮತ್ತು ಉಕ್ಕೇರುವಾಗ,
ದೇಹದ ಕಾವು ಬಿಗಿತ ಮಿಡಿತ ಮತ್ತೇಕೆ ಬೇಕು?
ಹೊರಗೆ ದೂರವಾದರೂ, ಒಳಗೆ ಒಳಗಿರುವಾಗ
ದೂರ ತೀರದ ಜಂಜಾಟ ನಮಗೇಕೆ ಬೇಕು?

ದೂರ ತೀರಿದರೆ, ನಾವು ನಾವು ಮತ್ತೆ ಸೇರಿದರೆ,
ನಿನ್ನನನ್ನ ಈ ತುಡಿತ ಹೊಂದಾಣಿಕೆ ಉಳಿಯುವುದೆ?
ನಿನ್ನನನ್ನ ಹಿಡಿದಿರುವ ಬಿಗಿತ ನಿಜ ಸ್ಥಿರವಾದುದಾದರೆ,
ದೂರಸಾನ್ನಿಧ್ಯದ ತೊಡಕುಗಳು ಮತ್ತೆ ಉಳಿಯುವುದೆ?

Saturday, June 24, 2017
Topic(s) of this poem: love,life
COMMENTS OF THE POEM
READ THIS POEM IN OTHER LANGUAGES
Close
Error Success