ಸಮ ತೋಲ Poem by Vidya Pandarinath

ಸಮ ತೋಲ

Rating: 5.0

ಒಂದೊಮ್ಮೆ ತಿಳಿ ತ೦ಗಾಳಿ ಬೀಸಿ

ಅಲೆಗಳ ನಗುವ ಚೆಲ್ಲುತ ನಿರಗ೯ಳ

ಬಾನಿನ ಕ೦ಗಳಲಿ ತು೦ಬಿ ಹಸಿ

ಚೈತನ್ಯ ದಾ ಅನ೦ತ ಲಯಗಳ

ನಿಗೂಢ ಲಹರಿಯಲಿ ಮೂಡುತಿರಲು

ಹುಮ್ಮಸ್ಸು, ಸಾರುತಿಹುದಲ್ಲ - ಮುನ್ನ ಡೆಯು ತಿರಲು!


ಮಗದೊಮ್ಮೆ ಕಾಮೋಡ ಕವಿದು

ಹುಬ್ಬು ಗ೦ಟಿ ಕ್ಕುವ ಅಲೆಗಳ ಕುಪಿ ತ

ರೇಗಾಟ, ಪ೦ಜುಬಡಿದು ಕೊಚ್ಚಿ

ಎಳೆದೊಯ್ಯವ, ಚಿಮ್ಮಿ ಚೆದುರಿ ಸು ವ

ರಸ - ಕಸ ಗಳ ಬೆರೆಸಿ ಕದಡುವ,

ವಿಕೃತ ಪರಿಯ ಕಂಡವರು ಬಲ್ಲ ರು

ಜಗಳ- ಸಲ್ಲಾಪಗಳನ ಸಹಜತೆಯ;

ಸವಿ ಕಾಣ ದ ಸಪ್ಪೆ ತಿನಿಸಾಗ ಬೇಕೆ

ಜೀವ- ಜಿಹ್ವೆ ದ ಅನುಬವ ಸಾರ...?

ವಿಧಿಗೆ ಶರಣು ಹೇಳುವ, ಬಲಕ್ಕೆ ಸೋಲುವ

ಹೇಡಿಯು ಕಾಣುವುದು ಕಗ್ಗತ್ತ ಲ ಮೂಲೆ ಮಾತ್ರ!

ಚಾಡ್ಯ ಸಂಕೋಲೆಗಳನ್ನು ತುಂಡರಿಸಿ

ಮೌಡ್ಯ ಆಮಿಷಗಳ ಸೆರೆ ಬಿಡಿಸಿ

ಹೊರ ಹೊಮ್ಮಿ ಕಾಣ ಬಾರದೇ ಸಮತೋಲ -

ಅತಿ - ಮಿತಿಯ ಮಾದರಿಯ ಸಾಗರದ೦ತೆ...?

Thursday, September 23, 2021
Topic(s) of this poem: good
POET'S NOTES ABOUT THE POEM
It is an expression about the need for equilibrium in a world too full of paradoxes and extremities inducing in different ways at different times
COMMENTS OF THE POEM
Dr Dillip K Swain 23 September 2021

English translation please....!

0 0 Reply
READ THIS POEM IN OTHER LANGUAGES
Close
Error Success