ಬೇಡದ ಜಾತಿ: ಅರಿವಿನ ಜ್ಯೋತಿ! ! ! (ಜಾತಿಯ ಫಜೀತಿ, ಜ್ಯೋತಿಯ ನೀತಿ) Poem by DR.DEEPAK VISWANATH

ಬೇಡದ ಜಾತಿ: ಅರಿವಿನ ಜ್ಯೋತಿ! ! ! (ಜಾತಿಯ ಫಜೀತಿ, ಜ್ಯೋತಿಯ ನೀತಿ)

ಜಾತಿಯ ಹೊಟ್ಟೆಯು ಬಿಗಿದಪ್ಪಿತು,
ಫಜೀತಿಯ ಉಬ್ಬಸ ಜೀವತೆಗೆಯಿತು..

ಜಾತಿ ದ್ವೇಷದ ಹೊಗೆ,
ಫಜೀತಿ ಆವೇಶದ ಅಪ್ಪುಗೆ..

ಜಾತಿ ಎರಡಕ್ಷರ, ತೊಂದರೆಗಳು ಸರಮಾಲೆ 'ಶುರು',
ಫಜೀತಿ ಮೂರಕ್ಷರ, ತೊಂದರೆಗಳು ಅಷ್ಟೇ ಅಲ್ಲ, ಜೀವನವೇ ಅಂತ್ಯ..

ದುಡಿಯೋ ಕೈಗಳಿಗೆ, ಬೆವರು-ಸುರಿಸೋ ದೇಹಕ್ಕಿಲ್ಲ ಜಾತಿಯ ಹಂಗು, ಗುಂಗು;
ದುಡಿಯದೆ, ನಮ್ಮನ್ನು ಸದಾ ತೊಂದರೆಗೆ ಒಳಪಡಿಸಿ, ನಮ್ಮ-ನಮ್ಮಲ್ಲಿ ಕಚ್ಚಾಡುವಂತೆ ಮಾಡಿ ಮಜಾ ತೆಗೆದುಕೊಳ್ಳೋ ಪುಡಾರಿಗೆ ಬೇಕು ಜಾತಿಯ ಗುಂಗು, ರಂಗು..

ಕಾಯಕವೇ ಕೈಲಾಸ: ಜಾತಿಯೇ ರಾಶಿ-ರಾಶಿ ಕಸ..
ಕರುಣೆಯೇ ಮನುಷ್ಯತ್ವ: ಜಾತಿಯ ಬೇತೂರಾಟಿಕೆಯೇ ಶಂಡತ್ವ/ ನಪುಂಸಕತ್ವ..

ಜಾತಿಯು ಮನೆಯ ಹಿತ್ತಲಲ್ಲಿ ಚಂದ;
ಇಲ್ಲವಾದ್ರೆ, ಫಜೀತಿ ಬೀದಿಯಲ್ಲಿ ಬೆಂದು ಬಿಡುತ್ತೆ..

ಜಾತಿಗೆ ಆತಿಥ್ಯ: ಫಜೀತಿಗೆ ಸಾರಥ್ಯ..

ಜಾತಿ ಜೀವನಕ್ಕೆ ಸೋಂಕು: ಫಜೀತಿ ಬದುಕಿಗೆ ಮಂಕು/ಡೊಂಕು..

'ಜಾತಿಯ ಜ್ಯೋತಿ ಬೆಳಗಿದಲ್ಲಿ
ಫಜೀತಿಯ ಕೋತಿ ಅವರಿಸಿಬಿಡುತ್ತೆ'!

'ಜಾತಿ ಮನೆಯ ಅಂಗಳದಲ್ಲಿ ಮಂಗಳ, ಇಲ್ಲವಾದಲ್ಲಿ,
ಫಜೀತಿ ಮನೆ-ಮನೆಯವರ ಕಣ್ಗಳಲ್ಲಿ ತಳಮಳ'! !

ಇಷ್ಟೇ ಆಗ್ಬೇಕಾಗಿರೋದು:
೧.ಆಜ್ಞಾನದ ಜಾತಿಯನ್ನು ತೊಲಗಿಸಿ,
ವಿಜ್ಞಾನದ ಜ್ಯೋತಿಯನ್ನು ಬೆಳಗಿಸಿ!

೨.ಅಜ್ಞಾನದ ಜಾತಿ ನಶ್ವರ: ವಿಜ್ಞಾನದ ಜ್ಯೋತಿ ಅಜರಾಮರ! !

೩.ಸರ್ವ ಆಪತ್ತಿಗೂ ಜಾತಿಯೇ ಕಾರಣ: ಸಬಲ ಸಂಪತ್ತಿನ ಸಮೃದ್ಧಿಗೆ ಜ್ಯೋತಿಯೆ ಹೂರಣ! ! !

- ಡಾ. ದೀಪಕ ವಿಶ್ವನಾಥ

READ THIS POEM IN OTHER LANGUAGES
Close
Error Success