ನಿದ್ದೆ..! Poem by Vidya Pandarinath

ನಿದ್ದೆ..!

ಉರಿಬಿಸಿಲ ಧಗೆಯಲ್ಲಿ ಕುಡಿದು ಬೊಗಸೆ ಕೈ ನೀರ
ಸಂತೆಯ ಮರದಡಿಯ ಆ ಹಾಸು ಕಲ್ಲಿನ ಮೇಲೆ
ಸಿದ್ಧ ಸೂಪ್ತ ನಿದ್ದೆ ಯ ಸೊಗಸು ದಕ್ಕಿಸಿಹನು ನೇರ
ಬಾಳು-ಕಾಳಿನ ಸಗಟು ಸಾರಿಗೆಯಲಿ ಎಲ್ಲಿ ನೆಲೆ,
ಯಾ ಗಂಜಿ, ಮುದ್ದೆಯ ತ್ಪಪ್ತಿಯ ಸರಳ ಊಟ,
ನಿರ್ಲಿಪ್ತ ಮನಸಿನ ವಿಹಾರದ ಮೊಜಿನ ಆಟ?


ರಸದಲ್ಲಿನ ಕಸ ಕಾಣುವ ಭೋಗಿಗೆ ಮೈತುಂಬ
ಹೊದ್ದರೂ ಬಿಡದು ಚಳಿ, ಕಳಕಳಿಯ ಒಳಸಂಕಟ
ಯಂತ್ರಗಳ ಗಾಳಿ, ಮಂತ್ರಗಳ ಮಾಧುರ್ಯ ಬಿಂಬ
ಸೆರೆಹಿಡಿಯಲು ಸಾಧ್ಯವೇ ಮನವೆಂಬ ಮರ್ಕಟ..!
ಕತ್ತಲಲ್ಲಿ ಕಣ್ಮುಚ್ಚಿ, ಮಾಡುವ ನಾಳಿನ ಲೆಕ್ಕ ಇಂದು
ನುಂಗದೇ ಬಿಡುವೊದೇ ನಿದ್ರೆಯ ಶೂನ್ಯ ಬಿಂದು?


ಸಿರಿವಂತ, ಬಲವಂತ, ಸಾಮ್ರಾಟರಿಗೂ, ಭಾರಿ
ಸಾಧನೆಯ ಎಲ್ಲೆಗೆ ಸರಿ-ನೇರ ಮಾರ್ಗವೇ ವಿತಿ;
ಹುಮ್ಮಸ್ಸಿನ ಮನಕೆ ಪ್ರಜ್ಞೆಯೇ ನಿಜ ದೀಪಧಾರಿ
ಅಳಿವಿನಂಚಿಗೆ ದೂಡುವುದೇ ದುರಾಸೆಯ ಮಿತಿ
ತೃಪ್ತಿ ಹೀರುವುದು ಮಕರಂದ ಮಧುವಿನ ಮುದ
ಮೋಹದ ಮುಸುಕಿನ ಗುದ್ದಾಟವು ಕಾಣದು ಹದ

POET'S NOTES ABOUT THE POEM
Sleep, ..is a metaphor/ a symbol, as you know in literature.Though essential, yet it is the most , evading aspect of man's life. ' Sidda' is a common name for a rustic, hardworking man which suggests that he is 'ready ' or has ' achieved what he wants'. Whereas such a common man especially in South India can manage to sleep anywhere, anytime easily and relax, it's a common sight of hard workers enjoying sleep without any bed or other accessories of luxurious living. A rich, highly accomplished man who constantly runs after futile, virtual achievements with no 'satisfaction ' at all foregoes such easy and relaxing sleep. The contrast is intended to manifest the fact that sleep and success which go together are intrinsic, but depend on man's other pursuits.
COMMENTS OF THE POEM
READ THIS POEM IN OTHER LANGUAGES
Close
Error Success