ಕುರುಕ್ಷೇತ್ರ, ಲಂಕಾ ಗಳ ಯುದ್ಧಗಳಿಗೆ ನೆಲ, ಸ್ತ್ರೀ ಕಾರಣ
ಎಂದಂತೆ, ಇಂದು ಎಲ್ಲೆ ಮೀರಿದ ವಿನಾಕಾರಣದ ದುರಾಸೆ:
ಆಸೇ- ಮೋಹ ಗಳ, ಒಂಟಿ ಒಡತನದ, ಸುಳ್ಳುಪೊಳ್ಳು ಹರಣ;
ಬಾಂಧವ್ಸ ಗಳ ಕಿರೀಟವನು ಹೊತ್ತು ಶೂಲಕೇರಿತು ಭರವಸೆ
ಅತ್ತಿಂದ ಇತ್ತ ಸಗಟು ಸರಕು ಗಳನು ಎತ್ತಿ ಬೇಡದ ಕಸ,
ನಶಿಸುವ, ನಾಶಮಾಡುವ ಅಲ್ಪ ಆಟಿಗೆಗೂ ಭರಿಸುವರು,
ಬೇಡಿಕೆ ಲಾಲಸೆ ಗಳ ಮೋಹಕ ದಾಸ್ಯದ ಹುಸಿ, ಮಿಥ್ಯ -ರಸ
ಬೇಕು- ಬೇಡಿಕೆ ಗಳ ಸಿದ್ದಾಂತಗಳ ರೂಪಿಸಿ ಹಾಗೇ ತರಿಸುವರು
ಲಾಭ- ನಷ್ಟಗಳ ಚಿತ್ತ್ರ ವಿಚಿತ್ರ ಲೆಕ್ಕಾಚಾರವನು ಮುಂದಿಟ್ಟು,
ಮುಚ್ಚಿಡುತ ಈ ಪ್ರಕೃತಿಯ ಸ್ವೇಚ್ಛೆ - ಕೊಡುಗೆಯ ಗುಟ್ಟು
ಎಲ್ಲಿ ನೋಡಿದರಲ್ಲಿ ಲಾಭ, ಆಸೆ ಗಳಿಗೆ ಸುಳ್ಳು ಮುಖವಾಡ
ದಾನಧರ್ಮಗಳ ಒಳಗುಟ್ಟು ತಿಳಿಸದ ಫಲಕಗಳು ಉದಾತ್ತ
ಕೆಣಕು ಕದನಗಳ ಭೀಕರ, ಘೋರ, ವಿನಾಶಕಾರಿ ಪವಾಡ!
ತಿಳಿದೂ ಅರಿಯದ ಈ ಮಾರಣ ಹೋಮ ಸಾಗುವುದು ಎತ್ತ?
ಬರಿಗೈಯಲ್ಲಿ ಬಂದವರು ಮರಳುವರಲ್ಲವೇ ಮುಷ್ಠಿ, ಮುಕ್ತ,
ಚಾಚು ಕೈ ಗಳಲಿ: ಆ ಗ್ರೀಕರ ಮಹಾನ್ ಯೋಧನ ನುಡಿ ಸೂಕ್ತ
ಗೆದ್ದು ಘರ್ಜಿಸಿದ ಯುದ್ಧವೀರರು ಏಕೆ ತ್ಯಜಿಸಿ ಸಾತ್ವಿಕ ರಾದರು
ದೋಚಿ ಸಿರಿವಂತರಾದವರು ಕಾಣರೇ ಬೆಚ್ಚಿಬೀಳಿಸುವ ಕನಸು
ಕೂಡಿ ಬಾಳುವ ಹಕ್ಕಿ-ಪ್ರಾಣಿ ಗಳಂತೆ ಪೂರ್ಣ ಪಡೆಯದಾದರು
ಹೋನ್ನು, ಅಧಿಕಾರ, ಸಿಧ್ಧಿ ಸಾಧನೆಯ ಆಗರವೇ ಒಳ ಮನಸು
ಅತಿಆಸೇ ಮೂಡಿಸುವ ರಂಗುರಂಗಿನ ಹುಸಿ- ಚಿತ್ತಾರ ಕ್ಷಣಿಕ
ಸಂಬಂಧಕ್ಕೆ ಬುಡಗಳಿಲ್ಲ, ಕೋಂಬೆಗಳಷ್ಟೇ, ಬಲ್ಲವ ಕಾಣಿ೯ಕ
This poem has not been translated into any other language yet.
I would like to translate this poem